ಪರವಾನಗಿ ನಿಯಮಗಳ ಉಲ್ಲಂಘನೆ ಮತ್ತು ಮಾರುಕಟ್ಟೆ ದರಕ್ಕಿಂತ ಅತ್ಯಂತ ಕಡಿಮೆ ಶುಲ್ಕ ಬರುತ್ತಿರುವುದನ್ನು ಗಮನಿಸಿದ ಎನ್‌ಡಿಎಂಸಿ, 2020ರ ಫೆಬ್ರವರಿ 13 ರಂದು ಭಾರತ್ ಹೋಟೆಲ್ಸ್‌ಗೆ ಶಾಕ್ ನೀಡಿತ್ತು. 2014ರಿಂದ ಅನ್ವಯವಾಗುವಂತೆ ವಾರ್ಷಿಕ 98 ಕೋಟಿ ರೂಪಾಯಿ ದರದಲ್ಲಿ ಒಟ್ಟು 1,063.74 ಕೋಟಿ ರೂಪಾಯಿಗಳನ್ನು ಬಾಕಿ ಪಾವತಿಸುವಂತೆ ನೋಟಿಸ್ ನೀಡಿತ್ತು. ಅಷ್ಟೇ ಅಲ್ಲದೆ, ಅಂದೇ ಹೋಟೆಲ್‌ನ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿತ್ತು.