ಪಿಣರಾಯಿ ಪಡೆಗೆ ಹ್ಯಾಟ್ರಿಕ್ ಕನಸು: ಪಿಣರಾಯಿ ವಿಜಯನ್ ಮೂರನೇ ಅವಧಿಗೂ ಸಿಎಂ ಪಟ್ಟ ಕಾಯ್ದುಕೊಳ್ಳುವ ಆಶಾಭಾವದಲ್ಲಿದ್ದಾರೆ. ಹಾಗೆಂದು, ಅವರ ಕೆಲವು ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನವೂ ಇದೆ. ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರ ಮೇಲೆ ಪೊಲೀಸರ ಲಾಠಿ ಪ್ರಹಾರ, ಅಯ್ಯಪ್ಪ ದೇವಸ್ಥಾನದ ವಿಗ್ರಹದ ಬಳಿಯಿರುವ ಚಿನ್ನದ ಪ್ರತಿಮೆ ಕಳವು, ಸರ್ಕಾರದ ಸಾಧನಾ ಸಮಾವೇಶಕ್ಕೆ ಕೋಟಿ ರೂ. ವೆಚ್ಚದ ಬಸ್ ಬಳಕೆ, ನಂತರ ಈ ದುಬಾರಿ ಬಸ್ ಮೂಲೆಪಾಲಾಗಿ ಸಾರ್ವಜನಿಕರ ತೆರಿಗೆ ಹಣದ ಪೋಲು ಎಂಬ ಟೀಕೆ, ಪುತ್ರಿಯ ಹೆಸರಿನಲ್ಲಿರುವ ಕಂಪನಿಯಿಂದ ಭಾರಿ ತೆರಿಗೆ ವಂಚನೆ ಆರೋಪಗಳು ಪಿಣರಾಯಿ ಸರ್ಕಾರದ ಮೇಲಿರುವ ಕಪ್ಪುಚುಕ್ಕೆಗಳು ಎಂಬುದು ರಾಜಕೀಯ ವಿಶ್ಲೇಷಕರ ವ್ಯಾಖ್ಯಾನ.