ಭಾಷೆ ಹಾಗೂ ಆಡಳಿತಾತ್ಮಕ ವಿಷಯಗಳಲ್ಲಿ ರಾಜ್ಯಪಾಲರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಸ್ಟಾಲಿನ್, ತಮಿಳಿನ ಮಹತ್ವವನ್ನು ತಮಗೆ ಮತ್ತು ಡಿಎಂಕೆ ಸರ್ಕಾರಕ್ಕೆ ಕಲಿಸುವ ಅಗತ್ಯವಿಲ್ಲ, ಅದರಲ್ಲಿ ನಮಗೆ ಪಿಎಚ್ಡಿ ಆಗಿದೆ ಎಂದು ಹೇಳಿದರು. ರಾಜ್ಯಪಾಲರು ಇದೇ ರೀತಿಯ ವಿಳಂಬ ನೀತಿಯನ್ನು ಮುಂದುವರಿಸಿದ್ದೇ ಆದಲ್ಲಿ, ತಮಿಳುನಾಡು ಶಾಸಕರು ನೇರವಾಗಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮಸೂದೆಗಳಿಗೆ ಒಪ್ಪಿಗೆ ಪಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.