ಬಿಷ್ಣೋಯಿ ಗ್ಯಾಂಗ್​ನಿಂದ ಭೋಜಪುರಿ ನಟ ಪವನ್ ಸಿಂಗ್​ಗೆ ಬೆದರಿಕೆ.. ಸಲ್ಮಾನ್​ ಖಾನ್​ನೊಂದಿಗೆ ಕಾಣಿಸಿಕೊಂಡರೆ ಹುಷಾರ್! |Bishnoi Gang

ಲಾರೆನ್ಸ್ ಬಿಷ್ಣೋಯಿ, ಪವನ್ ಸಿಂಗ್​, ಸಲ್ಮಾನ್​ ಖಾನ್​
ಲಾರೆನ್ಸ್ ಬಿಷ್ಣೋಯಿ, ಪವನ್ ಸಿಂಗ್​, ಸಲ್ಮಾನ್​ ಖಾನ್​
Published on

ಪ್ರಮುಖ ಮುಖ್ಯಾಂಶಗಳು

  • ಭೋಜ್‌ಪುರಿ ನಟ ಪವನ್ ಸಿಂಗ್​ಗೆ ಬಿಷ್ಣೋಯ್ ಗ್ಯಾಂಗ್​ನಿಂದ ಬೆದರಿಕೆ
  • ಸಲ್ಮಾನ್​ ಖಾನ್​ನೊಂದಿಗೆ ವೇದಿಕೆ ಹಂಚಕೊಳ್ಳದಂತೆ ಎಚ್ಚರಿಕೆ
  • ಮುಂಬೈ ಪೋಲಿಸರಲ್ಲಿ ದೂರು ದಾಖಲಿಸಿದ ಪವನ್​ ಸಿಂಗ್ ಮ್ಯಾನೇಜರ್​
ಮುಂಬೈ : ಭೋಜ್‌ಪುರಿ ನಟ ಪವನ್ ಸಿಂಗ್(Pawan singh) ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌(Bishnoi Gang)ನ ಸದಸ್ಯರು ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ನಟ ಸಲ್ಮಾನ್ ಖಾನ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿದ್ದು, ಈ ಕುರಿತು ನಟ ಪವನ್​ ಸಿಂಗ್ ಅವರ ಮ್ಯಾನೇಜರ್​ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ಶನಿವಾರದಿಂದ ನಿರಂತರವಾಗಿ ಬೆದರಕೆ ಸಂದೇಶಗಳು ಬರುತ್ತಿದ್ದು ಸೋಮವಾರ ಪೊಲೀಸ್ ಆಯುಕ್ತ ದೀಕ್ಷಿತ್ ಗೆಡಮ್ ಅವರು ದೂರು ಅರ್ಜಿಯನ್ನು ಸ್ವೀಕರಿಸಿದ್ದು, ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪವನ್ ಸಿಂಗ್, ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡಬಾರದು ಅಥವಾ ಅವರೊಂದಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಬಾರದು, ಇಲ್ಲದಿದ್ದರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ನಮೂದಿಸಲಾಗಿದೆ. ಭೋಜ್‌ಪುರಿ ನಟನ ತಂಡದ ಮತ್ತೊಬ್ಬ ಸದಸ್ಯರಿಗೂ ಇದೇ ರೀತಿಯ ಕರೆಗಳು ಬಂದಿವೆ ಮತ್ತು ಕರೆ ಮಾಡಿದವರು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪಂಜಾಬಿ ಗಾಯಕ-ರಾಜಕಾರಣಿ ಸಿಧು ಮೂಸೆವಾಲಾ ಹತ್ಯೆಯ ಆರೋಪಿ, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರನ್ನು ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಸಬರಮತಿ ಜೈಲಿನಲ್ಲಿ ಇರಿಸಲಾಗಿದೆ.(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net