ನವದೆಹಲಿ: ಕೇಂದ್ರ ಸರ್ಕಾರದ ಕಾರ್ಮಿಕ ಸುಧಾರಣೆಗಳು ಮತ್ತು ಆರ್ಥಿಕ ನೀತಿಗಳನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಒಕ್ಕೂಟಗಳು ನಾಳೆ (ಫೆ.12) ದೇಶಾದ್ಯಂತ ಭಾರತ್ ಬಂದ್‌ಗೆ(Bharat Bandh) ಕರೆ ನೀಡಿವೆ. ಈ ಪ್ರತಿಭಟನೆಯಿಂದಾಗಿ ದೇಶಾದ್ಯಂತ ಜನಜೀವನದಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ.
ಯಾವುದೆಲ್ಲಾ ಬಂದ್ ಆಗಲಿವೆ..?
ನಾಳೆಯ ಬಂದ್‌ನಿಂದಾಗಿ ಸಾರ್ವಜನಿಕ ವಲಯದ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.
ಬ್ಯಾಂಕಿಂಗ್ ಸೇವೆ: ಎಸ್‌ಬಿಐ (SBI) ಮತ್ತು ಬ್ಯಾಂಕ್ ಆಫ್ ಬರೋಡಾದಂತಹ ಪ್ರಮುಖ ಬ್ಯಾಂಕುಗಳು ಈಗಾಗಲೇ ತಮ್ಮ ಗ್ರಾಹಕರಿಗೆ ಎಚ್ಚರಿಕೆ ನೀಡಿವೆ. ನಗದು ವಹಿವಾಟು ಮತ್ತು ಬ್ಯಾಂಕ್ ಕೆಲಸಗಳಲ್ಲಿ ಅಡಚಣೆ ಉಂಟಾಗಬಹುದು.
ಸರ್ಕಾರಿ ಕಚೇರಿಗಳು: ಸರ್ಕಾರಿ ನೌಕರರ ಸಂಘಟನೆಗಳು ಬಂದ್ ಬೆಂಬಲಿಸುತ್ತಿರುವುದರಿಂದ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯವಾಗಬಹುದು.
ಸಾರ್ವಜನಿಕ ಸಾರಿಗೆ: ಕೆಎಸ್‌ಆರ್‌ಟಿಸಿ, ಬಿಎಂಟಿಸಿಯಂತಹ ಸಾರಿಗೆ ಸಂಸ್ಥೆಗಳ ಕೆಲವು ಸಂಘಟನೆಗಳು ಬೆಂಬಲ ನೀಡುವ ಸಾಧ್ಯತೆಯಿದ್ದು, ಬಸ್ ಸಂಚಾರದಲ್ಲಿ ವ್ಯತ್ಯಯವಾಗಬಹುದು. ಆಟೋ ಮತ್ತು ಟ್ಯಾಕ್ಸಿ ಸಂಚಾರವೂ ವಿರಳವಾಗಿರುವ ಸಾಧ್ಯತೆಯಿದೆ.
ಮಾರುಕಟ್ಟೆಗಳು: ಪ್ರಮುಖ ವ್ಯಾಪಾರಿ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿರುವುದರಿಂದ ಮಾರುಕಟ್ಟೆಗಳು ಮತ್ತು ಅಂಗಡಿ ಮುಂಗಟ್ಟುಗಳು ಮುಚ್ಚುವ ಸಂಭವವಿದೆ.
ಯಾವುದೆಲ್ಲಾ ತೆರೆದಿರುತ್ತವೆ? (ಅಗತ್ಯ ಸೇವೆಗಳು)
ಬಂದ್ ನಡುವೆಯೂ ಜನಸಾಮಾನ್ಯರ ಹಿತದೃಷ್ಟಿಯಿಂದ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.
ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೇವೆ: ತುರ್ತು ಚಿಕಿತ್ಸೆ, ಆಸ್ಪತ್ರೆಗಳು ಮತ್ತು ಮೆಡಿಕಲ್ ಶಾಪ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ವಿಮಾನ ನಿಲ್ದಾಣಗಳು: ವಿಮಾನ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಆದರೆ ನಿಲ್ದಾಣಕ್ಕೆ ಹೋಗುವ ದಾರಿಗಳಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಬಹುದು.
ಖಾಸಗಿ ಕಚೇರಿಗಳು: ಬಹುತೇಕ ಖಾಸಗಿ ಕಂಪನಿಗಳು ಮತ್ತು ಐಟಿ ಸಂಸ್ಥೆಗಳು ಕಾರ್ಯನಿರ್ವಹಿಸಲಿವೆ (ಕೆಲವೆಡೆ ವರ್ಕ್ ಫ್ರಮ್ ಹೋಮ್ ನೀಡುವ ಸಾಧ್ಯತೆಯಿದೆ).
ಅಗತ್ಯ ವಸ್ತುಗಳು: ಹಾಲು, ದಿನಪತ್ರಿಕೆ ಮತ್ತು ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.
ಎಚ್ಚರಿಕೆ
ಪ್ರತಿಭಟನೆಯ ತೀವ್ರತೆ ಹೆಚ್ಚಿರುವ ಕಡೆಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಹಠಾತ್ ಬದಲಾವಣೆಗಳಾಗಬಹುದು. ಹಾಗಾಗಿ, ದೂರದ ಪ್ರಯಾಣ ಬೆಳೆಸುವವರು ಹಾಗೂ ಬ್ಯಾಂಕ್ ಕೆಲಸಗಳಿರುವವರು ಇಂದೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು,(ಏಜೆನ್ಸೀಸ್).