_1786597524550.webp?w=480&auto=format%2Ccompress&fit=max)
_1786597524550.webp?w=480&auto=format%2Ccompress&fit=max)
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಚಂಡೀಗಢದ ಬುರೈಲ್ ಜೈಲಿನಲ್ಲಿ ಕಳೆದ 31 ವರ್ಷಗಳಿಂದ ಬಂಧಿಯಾಗಿರುವ ಜಗತಾರ್ ಸಿಂಗ್ ಹವಾರಾಗೆ 10 ದಿನಗಳ ಪೆರೋಲ್ ನೀಡುವಂತೆ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರಲ್ಲಿ ಮನವಿ ಮಾಡಿದ್ದಾರೆ. ಈ ವಿನಂತಿಗೆ ಮಾಜಿ ಮುಖ್ಯಮಂತ್ರಿ ದಿವಂಗತ ಬೀಯಂತ್ ಸಿಂಗ್ ಮೊಮ್ಮಗ ಹಾಗೂ ಬಿಜೆಪಿ ನಾಯಕ ರವನೀತ್ ಸಿಂಗ್ ಬಿಟ್ಟು (Ravneet Bittu) ಬೆಂಬಲ ಸೂಚಿಸಿದ್ದು, ಪಂಜಾಬ್ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.