ಪಂಕಜ್ ಬರ್ಮನ್ ನೇಪಾಳದ ಜಲವಿದ್ಯುತ್ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪ್ರವಾಹದ ನೀರು ಮಣ್ಣು ಮತ್ತು ಬಂಡೆಗಳೊಂದಿಗೆ ನುಗ್ಗಿ ಬಂದ ಕ್ಷಣವನ್ನು ನೆನಪಿಸಿಕೊಂಡ ಅವರು, ಹಠಾತ್ ದೊಡ್ಡ ಶಬ್ದ ಕೇಳಿಸಿತು. ಎಲ್ಲರೂ ಭಾಗೋ, ಭಾಗೋ (ಓಡಿ, ಓಡಿ) ಎಂದು ಕಿರುಚಾಡುತ್ತಿದ್ದರು. ನಾನು ಹೊರಗೆ ಬಂದ ತಕ್ಷಣ ನನ್ನ ಸ್ನೇಹಿತನೊಬ್ಬ ಭಾಗೋ ಪಂಕಜ್, ಭಾಗೋ ಎಂದು ಚೀರಿದ. ನೋಡ ನೋಡುತ್ತಿದ್ದಂತೆಯೇ ಅಪಾರ ಪ್ರಮಾಣದ ನೀರು ಮತ್ತು ಕೆಸರು ಒಳಗಡೆ ನುಗ್ಗಿತು ಎಂದು ಹೇಳಿದ್ದಾರೆ.