ಕೆ.ಆರ್. ಮಾರುಕಟ್ಟೆಯಲ್ಲಿ ಎಐ ರೋಬೋಟ್ ಪ್ರಯೋಗ? ತರಕಾರಿ ವ್ಯಾಪಾರಿಗಳ ತಲೆಯ ಮೇಲೆ ಕ್ಯಾಮೆರಾ ವೈರಲ್! KR Market

ಬೆಂಗಳೂರಿನ ಸಿಲಿಕಾನ್ ಸಿಟಿ ಈಗ ಕೇವಲ ಸಾಫ್ಟ್‌ವೇರ್ ಕೋಡಿಂಗ್‌ ಅಷ್ಟೇ ಅಲ್ಲ, ಜಾಗತಿಕ ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್ ಕ್ರಾಂತಿಯ ಹೊಸ ಪ್ರಯೋಗಾಲಯವಾಗಿ ಬದಲಾಗುತ್ತಿದೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ, ನಮ್ಮ ಹೆಮ್ಮೆಯ ಸಾಂಪ್ರದಾಯಿಕ ಕೆ.ಆರ್. ಮಾರುಕಟ್ಟೆಯಲ್ಲಿ ನಡೆದಿರುವ ಒಂದು ವಿಚಿತ್ರ ಹಾಗೂ ಅಷ್ಟೇ ಕುತೂಹಲಕಾರಿ ಪ್ರಯೋಗ ಈಗ ಇಂಟರ್ನೆಟ್ ಲೋಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.KR Market
ತರಕಾರಿ ವ್ಯಾಪಾರಿಗಳ ತಲೆಯ ಮೇಲೆ ಕ್ಯಾಮೆರಾ ವೈರಲ್
ತರಕಾರಿ ವ್ಯಾಪಾರಿಗಳ ತಲೆಯ ಮೇಲೆ ಕ್ಯಾಮೆರಾ ವೈರಲ್WEB
Published on: 

ಬೆಂಗಳೂರು : ಬೆಂಗಳೂರಿನ ಸಿಲಿಕಾನ್ ಸಿಟಿ ಈಗ ಕೇವಲ ಸಾಫ್ಟ್‌ವೇರ್ ಕೋಡಿಂಗ್‌ ಅಷ್ಟೇ ಅಲ್ಲ, ಜಾಗತಿಕ ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್ ಕ್ರಾಂತಿಯ ಹೊಸ ಪ್ರಯೋಗಾಲಯವಾಗಿ ಬದಲಾಗುತ್ತಿದೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ, ನಮ್ಮ ಹೆಮ್ಮೆಯ ಸಾಂಪ್ರದಾಯಿಕ ಕೆ.ಆರ್. ಮಾರುಕಟ್ಟೆಯಲ್ಲಿ ನಡೆದಿರುವ ಒಂದು ವಿಚಿತ್ರ ಹಾಗೂ ಅಷ್ಟೇ ಕುತೂಹಲಕಾರಿ ಪ್ರಯೋಗ ಈಗ ಇಂಟರ್ನೆಟ್ ಲೋಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹೌದು, ಸದಾ ಹೂವು, ಹಣ್ಣು ಹಾಗೂ ತರಕಾರಿಗಳ ಮಾರಾಟದಿಂದ ಗಿಜಿಗುಡುವ ಈ ಮಾರುಕಟ್ಟೆಯಲ್ಲಿ, ವ್ಯಾಪಾರಿಗಳು ತಮ್ಮ ತಲೆಯ ಮೇಲೆ ಕ್ಯಾಮೆರಾಗಳನ್ನು (Head-mounted Cameras) ಧರಿಸಿ ವ್ಯಾಪಾರ ಮಾಡುತ್ತಿರುವ ದೃಶ್ಯಗಳು ಎಲ್ಲರ ಹುಬ್ಬೇರಿಸಿವೆ.

ತರಕಾರಿ ವ್ಯಾಪಾರಿಗಳ ತಲೆಯ ಮೇಲಿರುವ ಆ ಕ್ಯಾಮೆರಾಗಳ ರಹಸ್ಯವೇನು?

ಸಾಮಾನ್ಯವಾಗಿ ಗ್ರಾಹಕರನ್ನು ಕೂಗಿ ಕರೆಯುತ್ತಾ, ಚೌಕಾಸಿ ಮಾಡುತ್ತಾ ವ್ಯಾಪಾರ ಮಾಡುವ ಸಾಂಪ್ರದಾಯಿಕ ವ್ಯಾಪಾರಿಗಳ ತಲೆಯ ಮೇಲೆ ಈ ತಂತ್ರಜ್ಞಾನದ ಕಣ್ಣುಗಳು ಕಾಣಿಸಿಕೊಂಡಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇನ್‌ಸ್ಟಾಗ್ರಾಂನ ಕ್ಯಾಂಡಿಡ್ ಬೆಂಗಳೂರು ಪುಟದಲ್ಲಿ ಮೊದಲು ಬಹಿರಂಗಗೊಂಡ ಈ ಅಪರೂಪದ ಚಿತ್ರಗಳು ಈಗ ವೈರಲ್ ಆಗಿವೆ.

ಈ ವಿಶೇಷ ಸಾಧನಗಳು ವ್ಯಾಪಾರಿಗಳ ದೈನಂದಿನ ಚಲನವಲನಗಳನ್ನು ಅತಿ ಸೂಕ್ಷ್ಮವಾಗಿ ದಾಖಲಿಸುತ್ತಿವೆ. ಗ್ರಾಹಕರಿಗೆ ತರಕಾರಿಗಳನ್ನು ತೂಗಿ ಕೊಡುವ ರೀತಿ, ಕೈಗಳ ಚಲನೆ, ತರಕಾರಿಗಳನ್ನು ಜೋಡಿಸುವ ವಿಧಾನ ಹಾಗೂ ಸಂವಹನ ನಡೆಸುವಾಗ ದೇಹಭಾಷೆಯಂತಹ ಪ್ರತಿಯೊಂದು ಸೂಕ್ಷ್ಮ ಚಟುವಟಿಕೆಗಳನ್ನು ಇವು ಸೆರೆಹಿಡಿಯುತ್ತಿವೆ.

ಇದನ್ನೂ ಓದಿ : ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಜನವರಿ 2026ರಿಂದಲೇ ಹಿಂಬಾಕಿ ಪಾವತಿ ಕನ್‌ಫರ್ಮ್! 8th Pay Commission

ಮನುಷ್ಯರ ಕೆಲಸವನ್ನು ಕಲಿಯುತ್ತಿವೆಯೇ ರೋಬೋಟ್‌ಗಳು?

ಈ ಕ್ಯಾಮೆರಾಗಳ ಹಿಂದಿನ ಅಸಲಿ ಉದ್ದೇಶದ ಬಗ್ಗೆ ತಂತ್ರಜ್ಞಾನ ವಲಯದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಇದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧಾರಿತ ಹ್ಯೂಮನಾಯ್ಡ್ ರೋಬೋಟ್‌ಗಳಿಗೆ ತರಬೇತಿ ನೀಡುವ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನವಾಗಿರಬಹುದು ಎಂದು ತಜ್ಞರು ಊಹಿಸಿದ್ದಾರೆ.

ರೋಬೋಟ್‌ಗಳಿಗೆ ವಸ್ತುಗಳನ್ನು ಹಿಡಿಯುವುದು, ಎತ್ತುವುದು, ಅತ್ಯಂತ ಸಹಜವಾಗಿ ಮನುಷ್ಯರಂತೆ ಚಲಿಸುವುದನ್ನು ಕಲಿಸುವುದು ಅತ್ಯಂತ ಸಂಕೀರ್ಣವಾದ ಕೆಲಸ.ಮಾರುಕಟ್ಟೆಯಲ್ಲಿ ಮನುಷ್ಯರು ಹೇಗೆ ಕೆಲಸ ಮಾಡುತ್ತಾರೆ ಎಂಬುದರ ಲೈವ್ ವಿಡಿಯೋ ಮತ್ತು ಮೋಷನ್ ಡೇಟಾವನ್ನು ಪಡೆದುಕೊಂಡು, ರೋಬೋಟ್‌ಗಳಿಗೆ ಅದೇ ರೀತಿ ಕಾರ್ಯನಿರ್ವಹಿಸಲು ಕೋಡಿಂಗ್ ಮತ್ತು ಟ್ರೈನಿಂಗ್ ನೀಡಲಾಗುತ್ತದೆ. ಮುಂದೊಂದು ದಿನ ನಮಗೆ ತರಕಾರಿ, ಸೊಪ್ಪು ಮಾರಲು ರೋಬೋಟ್‌ಗಳೇ ಬರಲಿವೆಯೇ ಎಂಬ ಆತಂಕ ಹಾಗೂ ಅಚ್ಚರಿ ಎರಡನ್ನೂ ಈ ಘಟನೆ ಹುಟ್ಟುಹಾಕಿದೆ.

ಇನ್ನು ಮುಂದೆ ರೋಬೋಟ್‌ಗಳೇ ತರಕಾರಿ ಮಾರುತ್ತವೆಯೇ?

ಈ ವಿಚಿತ್ರ ವೈರಲ್ ವೃತ್ತಿಯು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಹಾಸ್ಯ ಹಾಗೂ ಗಂಭೀರ ಚಿಂತನೆಗಳನ್ನು ವ್ಯಕ್ತಪಡಿಸಿದ್ದಾರೆ. ಮುಂದೊಂದು ದಿನ ನಮಗೆ ತರಕಾರಿ ಹಾಗೂ ಹೂವು ಮಾರಲು ರೋಬೋಟ್‌ಗಳೇ ಬರಬಹುದುಎಂದು ಕೆಲವರು ತಮಾಷೆ ಮಾಡಿದರೆ, ಇನ್ನು ಕೆಲವರು ಗಂಭೀರ ಆತಂಕ ವ್ಯಕ್ತಪಡಿಸಿ, ಕಷ್ಟಪಟ್ಟು ದುಡಿಯುವ ಬಡ ಕಾರ್ಮಿಕರ ಸಣ್ಣಪುಟ್ಟ ಚಲನೆಗಳನ್ನೂ ತಂತ್ರಜ್ಞಾನಕ್ಕೆ ಧಾರೆರೆದುಕೊಟ್ಟು, ಕೊನೆಗೆ ಅವರೇ ತಮ್ಮ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಾರದು ಎಂದು ಎಚ್ಚರಿಸಿದ್ದಾರೆ.

ಬೆಂಗಳೂರಿನ ಮಾರುಕಟ್ಟೆಯ ಜೀವಂತಿಕೆಯಾದ ಆಲೂ ಲೇಲೋ, ಕಂದಾ ಲೇಲೋ ಎನ್ನುವ ಸಾಂಪ್ರದಾಯಿಕ ಕೂಗಿನ ಧ್ವನಿಯನ್ನೂ ಈ ಕ್ಯಾಮೆರಾಗಳು ಸೆರೆಹಿಡಿಯುತ್ತಿರಬಹುದೇ ಎಂದು ನೆಟ್ಟಿಗರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಒಟ್ಟಿನಲ್ಲಿ, ತಂತ್ರಜ್ಞಾನ ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂಬುದಕ್ಕೆ ಕೆ.ಆರ್. ಮಾರುಕಟ್ಟೆಯ ಈ ದೃಶ್ಯಗಳೇ ಜೀವಂತ ಸಾಕ್ಷಿಯಾಗಿದ್ದು, ಈ ರಹಸ್ಯ ಪ್ರಯೋಗದ ಹಿಂದಿನ ಅಸಲಿ ಉದ್ದೇಶ ಮತ್ತು ಸಂಸ್ಥೆಯ ಅಧಿಕೃತ ಮಾಹಿತಿ ಹೊರಬರುವುದನ್ನು ಕಾದು ನೋಡಬೇಕಿದೆ.