ಬೆಂಗಳೂರು: ಬೆಂಗಳೂರು ಎಂದರೆ ನೆನಪಾಗುವುದೇ ಜನದಟ್ಟಣೆ, ಟ್ರಾಫಿಕ್ ಹಾಗೂ ಎಚ್ಚರಿಕೆ ನೀಡಲು ನಿಂತಿರುವ ಪೊಲೀಸರು. ಈ ನಡುವೆಯೂ ಕೆಲವೊಂದು ವಾಹನ ಸವಾರರು ಸಂಚಾರ ಉಲ್ಲಂಘನೆ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ, ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದಲ್ಲಿ ಚಲಾಯಿಸುತ್ತಿದ್ದಾಗ ಹೆಲ್ಮೆಟ್ ಧರಿಸುವ ಬದಲು ತಲೆಗೆ ಬಾಣಲೆಯನ್ನು ಹಿಡಿದುಕೊಂಡು ಹೋಗುತ್ತಿರುವ ದೃಶ್ಯ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.