ಇವಿಎಂ ಹ್ಯಾಕ್​ ಬಗ್ಗೆ ಪ್ರಚೋದನಕಾರಿ ಹೇಳಿಕೆ; ಪೊಲೀಸರಿಂದ ಬಂಗಾಳಿ ಹೋರಾಟಗಾರ ಗರ್ಗಾ ಚಟರ್ಜಿ ಬಂಧನ | Garga Chatterjee

ಬಾಂಗ್ಲಾ ಪೊಕ್ಖೋ ಮುಖ್ಯಸ್ಥ ಗರ್ಗಾ ಚಟರ್ಜಿ
ಬಾಂಗ್ಲಾ ಪೊಕ್ಖೋ ಮುಖ್ಯಸ್ಥ ಗರ್ಗಾ ಚಟರ್ಜಿ
Published on
ಕೋಲ್ಕತ್ತಾ: ಇವಿಎಂ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ(ಮೇ 12) ಕೋಲ್ಕತ್ತಾ ಸೈಬರ್ ಸೆಲ್ ಪೊಲೀಸರು, ಬಂಗಾಳಿ ಭಾಷೆ ಹೋರಾಟಗಾರ ಮತ್ತು ಬಾಂಗ್ಲಾ ಪೊಕ್ಖೋ ಮುಖ್ಯಸ್ಥ ಗರ್ಗಾ ಚಟರ್ಜಿಯನ್ನು ಬಂಧಿಸಿದ್ದಾರೆ.
ಭಾರತೀಯ ಚುನಾವಣಾ ಆಯೋಗ ನೀಡಿದ ದೂರಿನನ್ವಯ ಬಂಧಿಸಲಾಗಿದ್ದು, ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಬಂಗಾಳದಲ್ಲಿ ನಡೆದ ಚುನಾವಣೆಯ ಸಮಯದಲ್ಲಿ ಟಿಎಂಸಿ ಸಿಂಪಥೈಸರ್ ಆಗಿರುವ ಗಾರ್ಗಾ, ರಾತ್ರಿಯಿಡೀ ಯಂತ್ರಗಳನ್ನು ಮುಚ್ಚಿಟ್ಟಿದ್ದರೂ ಎಣಿಕೆಯ ಸಮಯದಲ್ಲಿ ಇವಿಎಂ ಕಾರ್ಯನಿರ್ವಹಿಸುವ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು ಎನ್ನಲಾಗಿದೆ.
ಪಶ್ಚಿಮ ಬಂಗಾಳದ ಸ್ಥಳೀಯ ಯುವಕರಿಗೆ ಬಂಗಾಳಿ ಭಾಷೆ, ಸಂಸ್ಕೃತಿ ಮತ್ತು ಉದ್ಯೋಗಾವಕಾಶಗಳ ರಕ್ಷಣೆಗಾಗಿ 2017ರಲ್ಲಿ ಸ್ಥಾಪನೆಯಾಗಿರುವ ಬಾಂಗ್ಲಾ ಪೊಕ್ಖೊದ ಮುಖಸ್ಥರಾಗಿರುವ ಗರ್ಗಾ ಅವರನ್ನು ದಕ್ಷಿಣ ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ. ಅವರ ಖಾಸಗಿ ಭದ್ರತಾ ಸಿಬ್ಬಂದಿಯಿಂದ 20 ಕ್ಕೂ ಹೆಚ್ಚು ಸುತ್ತುಗಳ ಜೀವಂತ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
2022ರ ಆರಂಭದಲ್ಲೂ ಅಸ್ಸಾಮಿ ಜನರ ಭಾವನೆಗಳಿಗೆ ನೋವುಂಟು ಮಾಡಿದ ಮತ್ತು ಸಮುದಾಯಗಳ ನಡುವೆ ದ್ವೇಷವನ್ನು ಸೃಷ್ಟಿಸಿದ ಆರೋಪದ ಮೇಲೆ ಗರ್ಗಾ ಅವರನ್ನು ಗುವಾಹಟಿ ಹೈಕೋರ್ಟ್ ಆದೇಶದ ಮೇರೆಗೆ ಕೋಲ್ಕತ್ತಾ ಪೊಲೀಸರು ಬಂಧಿಸಿದ ಕೋರ್ಟ್​ಗೆ ಹಾಜರುಪಡಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net