Bengal SIR | ಡಿ.11 ರೊಳಗೆ ಪಟ್ಟಿ ಮರು ಪರಿಶೀಲಿಸಿ, ಅನರ್ಹರನ್ನು ತೆಗೆದುಹಾಕಿ; ಬಿಎಲ್​ಒಗಳಿಗೆ ಬಂಗಾಳ ಚುನಾವಣಾ ಆಯೋಗದ ನಿರ್ದೇಶನ

Bengal SIR
Bengal SIR
Published on
ಕೊಲ್ಕತ್ತಾ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತೊಡಗಿರುವ ಬೂತ್ ಮಟ್ಟದ ಅಧಿಕಾರಿಗಳು, ಡಿಸೆಂಬರ್ 11 ರೊಳಗೆ ಫಾರ್ಮ್‌ಗಳನ್ನು ಮರು ಪರಿಶೀಲಿಸಿ ಮತ್ತು ಮೃತರಾಗಿರುವ, ಗೈರುಹಾಜರಾದ ಮತ್ತು ನಕಲಿ ಮತದಾರರ ಹೆಸರುಗಳನ್ನು ಅಳಿಸಲು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಅಗರ್ವಾಲ್ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿದೆ.
ಉದ್ದೇಶಪೂರ್ವಕ ಪ್ರಮಾದಗಳ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಸಿಇಸಿ, ಆ ರೀತಿಯ ಕ್ರಮಗಳು ಕಂಡುಬಂದರೆ ಕೇಂದ್ರ ಚುನಾವಣಾ ಆಯೋಗ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದಿದ್ದು, ಎಸ್‌ಐಆರ್ ಡೇಟಾವನ್ನು ಅತ್ಯಂತ ಎಚ್ಚರಿಕೆಯಿಂದ ಅಪ್‌ಲೋಡ್ ಮಾಡುವಂತೆ ಸೂಚನೆ ನೀಡಿದ್ದಾರೆ. ಪ್ರತಿಯೊಬ್ಬ ಅರ್ಹ ಮತದಾರರ ತನ್ನ ಹೆಸರನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳುವುದು ಮತ್ತು ಪ್ರತಿಯೊಬ್ಬ ಅನರ್ಹ ಮತದಾರನ ಹೆಸರನ್ನು ಅಳಿಸುವುದು ಚುನಾವಣಾ ಆಯೋಗದ ಗುರಿ. ಅಧಿಕಾರಿಗಳ ಅಜಾಗರೂಕತೆಯಿಂದ ಯಾವೊಬ್ಬ ವ್ಯಕ್ತಿಯೂ ಸಂವಿಧಾನ ಕೊಟ್ಟಿರುವ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದೆ.

ಪಶ್ಚಿಮ ಬಂಗಾಳದಲ್ಲಿ ಬಿಎಲ್‌ಒಗಳ ಆತ್ಮಹತ್ಯೆ..

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಕುರಿತು ಭಾರಿ ವಿವಾದ ಭುಗಿಲೆದ್ದಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ, ಈ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸುವಂತೆ ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆಯೂ ಪಶ್ಚಿಮ ಬಂಗಾಳವನ್ನು ಗುರಿಯಾಗಿಸಿಕೊಂಡಿದೆ ಎಂದಿರುವ ಪಕ್ಷದ ನಾಯಕರು, ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದೆ.
ರಾಜ್ಯದಲ್ಲಿ ಅನೇಕ ಬಿಎಲ್‌ಒಗಳ ಆತ್ಮಹತ್ಯೆಗೆ ಈ ಎಸ್‌ಐಆರ್ ಕಾರಣ, ಈ ಪ್ರಕ್ರಿಯೆ ಬೂತ್​ ಮಟ್ಟದ ಅಧಿಕಾರಿಗಳ ಮೇಲೆ ತೀವ್ರ ಒತ್ತಡವನ್ನು ಸೃಷ್ಟಿಸಿದೆ ಎಂದು ಆರೋಪಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಆಯೋಗ, ಎಸ್‌ಐಆರ್ ಕುರಿತಾಗಿ ಜನರ ದಾರಿ ತಪ್ಪಿಸಬೇಡಿ ಮತ್ತು ಬಿಎಲ್‌ಒಗಳ ಮೇಲೆ ಒತ್ತಡ ಹೇರುವುದನ್ನು ಮತ್ತು ಬೆದರಿಕೆ ಹಾಕುವುದನ್ನು ನಿಲ್ಲಿಸಿ ಎಂದು ಟಿಎಂಸಿಗೆ ಸ್ಪಷ್ಟ ಸೂಚನೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net