ಜನಸಂಖ್ಯಾ ಬದಲಾವಣೆಗಳನ್ನು ಒಮ್ಮೆ ಅನುಮತಿಸಿದರೆ ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿರುವ ಶರ್ಮಾ, ಅಸ್ಸಾಂನಲ್ಲಿ ಈಗ ಶೇ. 60ರಷ್ಟು ಹಿಂದೂಗಳು ಮತ್ತು ಶೇ. 40ರಷ್ಟು ಮುಸ್ಲಿಮರಿದ್ದಾರೆ. ಒಳನುಸುಳುವಿಕೆ ಹೀಗೆಯೇ ಮುಂದುವರಿದರೆ ಅಸ್ಸಾಂ ಮೊದಲು ಪತನಗೊಳ್ಳುತ್ತದೆ, ನಂತರ ಬಂಗಾಳ, ಬಿಹಾರ ಮತ್ತು ಜಾರ್ಖಂಡ್ಗಳಿಗೆ ಇದು ಹರಡುತ್ತದೆ. ಭಾರತವನ್ನು ಸುರಕ್ಷಿತವಾಗಿಡಲು ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಐದು ರಾಜ್ಯಗಳೊಂದಿಗೆ ಬಾಂಗ್ಲಾದೇಶ ಗಡಿ ಹಂಚಿಕೊಂಡಿದ್ದು, ಯಾವುದೇ ಒಂದು ರಾಜ್ಯದ ಗಡಿ ತೆರೆದಿದ್ದರೂ ಅದು ಇಡೀ ಈಶಾನ್ಯ ಭಾರತದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಬಂಗಾಳದ ಮತದಾರರು ಎರಡನೇ ಹಂತದ ಮತದಾನದಲ್ಲಿ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.