ಈ ಬಗ್ಗೆ ಶನಿವಾರ ಕೋಲ್ಕತ್ತಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಸರ್ಕಾರದ ಬೃಹತ್ ರೋಜ್‌ಗಾರ್ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ, ನೂತನವಾಗಿ ಆಯ್ಕೆಯಾದ ನೂರಾರು ಅಭ್ಯರ್ಥಿಗಳಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿ ಸುವೇಂದು ಮಾತನಾಡಿದ್ದಾರೆ. ಅಲ್ಲದೆ, ಭ್ರಷ್ಟಾಚಾರದ ಕೂಪಕ್ಕೆ ತಳ್ಳಲ್ಪಟ್ಟಿರುವ ಪಶ್ಚಿಮ ಬಂಗಾಳವನ್ನು ಈ ದುಸ್ಥಿತಿಯಿಂದ ಹೊರತಂದು, ರಾಜ್ಯದ ಹಳೆಯ ವರ್ಚಸ್ಸು ಮತ್ತು ಗೌರವವನ್ನು ಮರಳಿ ಸ್ಥಾಪಿಸುವುದೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಈ ಸಂದರ್ಭದಲ್ಲಿ ಶಪಥ ಮಾಡಿದ್ದಾರೆ.