ಬಂಗಾಳ ಚುನಾವಣೆ 2026: ಓವೈಸಿ-ಹುಮಾಯೂನ್ ಕಬೀರ್ ಮೈತ್ರಿ ಘೋಷಣೆ; ಸಿಎಂ ಸ್ಥಾನದಿಂದ ದೀದಿ ಬಾಹರ್? Bengal Elections 2026
ಅಸಾದುದ್ದೀನ್ ಓವೈಸಿ ಜೊತೆ ಮೈತ್ರಿ ಮಾಡಿಕೊಂಡ ಹುಮಾಯೂನ್ ಕಬೀರ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಏಪ್ರಿಲ್ನಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ
ಅಸಾದುದ್ದೀನ್ ಓವೈಸಿ ಜೊತೆ ಮೈತ್ರಿ ಮಾಡಿಕೊಂಡ ಹುಮಾಯೂನ್ ಕಬೀರ್
ಈ ಮೈತ್ರಿ ಮಮತಾ ಬ್ಯಾನರ್ಜಿ ಸಿಎಂ ಆಗುವುದನ್ನು ತಪ್ಪಿಸುತ್ತಾ?
ಪಶ್ಚಿಮ ಬಂಗಾಳ: ಇನ್ನೇನು ಕೆಲವೇ ದಿನಗಳಲ್ಲಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ (Bengal Elections 2026) ನಡೆಯಲಿದ್ದು ಎಲ್ಲಾ ರಾಜಕೀಯ ಪಕ್ಷಗಳಿಂದ ಭರದ ಸಿದ್ದತೆ ನಡೆಯುತ್ತಿದೆ. ಏಪ್ರಿಲ್ 23 ಹಾಗೂ ಏಪ್ರಿಲ್ 25 ರಂದು ಎರಡು ಹಂತಗಳಲ್ಲಿ ನಡೆಯಲಿರುವ ಈ ಚುನಾವಣೆಯ ಫಲಿತಾಂಶವು ಮೇ 4 ರಂದು ಹೊರ ಬೀಳಲಿದೆ.
ಈ ಹಿನ್ನಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ, ಆಮ್ ಜನತಾ ಉನ್ನಯನ್ ಪಾರ್ಟಿ ಮುಖ್ಯಸ್ಥ ಹುಮಾಯೂನ್ ಕಬೀರ್ ಈ ಚುನಾವಣೆಯಲ್ಲಿ ನಮ್ಮ ಪಕ್ಷವು ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷದೊಂದಿಗೆ ಜೊತೆಗೂಡಿ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹುಮಾಯೂನ್ ಕಬೀರ್, ಅಸಾದುದ್ದೀನ್ ಓವೈಸಿ ನನ್ನ ಹಿರಿಯ ಸಹೋದರನಿದ್ದಂತೆ, ಈ ಬಾರಿಯ ಬೆಂಗಾಲ ಚುನಾವಣೆಯಲ್ಲಿ ನಾವಿಬ್ಬರೂ ಜೊತೆಗೂಡಿ ಕಣಕ್ಕಿಳೀಯಲಿದ್ದೆವೆ ಎಂದು ತಿಳಿಸಿದ್ದಾರೆ.
ಇಂದು (ಮಾ.25) ಸಂಜೆ 4 ಗಂಟೆಗೆ ನಮ್ಮಿಬ್ಬರ ಪಕ್ಷದ ಸುಮಾರು 180-190 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೆವೆ. ನನ್ನ ಹಿರಿಯಣ್ಣ ಓವೈಸಿ ಈ ಚುನಾವಣೆಯಲ್ಲಿ ನಿಮಿತ್ತ ನಡೆಯಲಿರುವ ಕನಿಷ್ಟ 20 ರ್ಯಾಲಿಗಳಲ್ಲಿ ನನ್ನ ಜೊತೆ ಇರುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಕಬೀರ್ ಹೇಳಿದ್ದಾರೆ.
ಮಮತಾಗೆ ಠಕ್ಕರ್ ಕೊಡ್ತಾರಾ ಕಬೀರ್?
ಈ ಮೊದಲು ತ್ರಣಮೂಲ ಕಾಂಗ್ರೆಸ್ ಪಕ್ಷದಲ್ಲೇ ಇದ್ದ ಹುಮಾಯೂನ್ ಕಬೀರ್, ನಂತರ ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ, ಆಮ್ ಜನತಾ ಉನ್ನಯನ್ ಪಾರ್ಟಿ ಎಂಬ ಪಕ್ಷವನ್ನು ಕಟ್ಟಿಕೊಂಡಿದ್ದಾರೆ.
ಕಳೆದೆರಡು ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬೆಂಬಲಕ್ಕೆ ನಿಂತಿದ್ದ ಅಲ್ಪ ಸಂಖ್ಯಾತ ಸಮಾಜ ಈ ಬಾರಿ ಹುಮಾಯೂನ್ ಕಬೀರ್ ಪಕ್ಷಕ್ಕೆ ಬೆಂಬಲ ಸೂಚಿಸಿದರೆ ಮಮತಾ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟವಾಗುತ್ತದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ,(ಏಜನ್ಸೀಸ್).