ಈ ಮಹತ್ವದ ಬೆಳವಣಿಗೆಯ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮುಖ್ಯಮಂತ್ರಿ ಸುವೇಂದು, ಬಂಗಾಳದ ಗಡಿ ಭಾಗಗಳಲ್ಲಿ ಭದ್ರತೆಯನ್ನು ಇನ್ನು ಹತ್ತು ಪಟ್ಟು ಬಲಪಡಿಸಲು ನಮ್ಮ ಸರ್ಕಾರ ತೀವ್ರಗತಿಯ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ, ಬಿಎಸ್‌ಎಫ್ ಔಟ್‌ಪೋಸ್ಟ್‌ಗಳು ಮತ್ತು ಮುಳ್ಳುತಂತಿ ಬೇಲಿ ನಿರ್ಮಾಣಕ್ಕಾಗಿ ಹೆಚ್ಚುವರಿ ಭೂಮಿಯನ್ನು ಹಸ್ತಾಂತರಿಸಲಾಗಿದ್ದು, ಒಟ್ಟು ವಿಸ್ತೀರ್ಣ ಈಗ 142.79 ಎಕರೆಗೆ ತಲುಪಿದೆ ಎಂದು ಪ್ರಕಟಿಸಿದ್ದಾರೆ.