ಇಂದು ತಾಂತ್ರಿಕವಾಗಿ, ವೈಜ್ಞಾನಿಕ ಮುಂದುವರೆದಿದ್ದೇವೆ. ಎಐನಿಂದ ಸಾಕಷ್ಟು ಕೆಲಸವಾಗುತ್ತದೆ. ಮಗ್ಗಕ್ಕೆ ಯಂತ್ರ, ಕೃಷಿಗೆ ಯಂತ್ರ ಸಾಕಷ್ಟು ಬದಲಾವಣೆ ಕಂಡಿದ್ದೇವೆ. ಮಂಗಳ ಗ್ರಹದಲ್ಲಿಯೂ ಶೋಧನೆಯ ಭಾಗವಾಗಿ ಕೆಲಸಗಳನ್ನು ನಡೆಸುತ್ತಿರುವ ಈ ಭಾರತ ದೇಶದಲ್ಲಿ ಜಾತಿಯೆಂಬ ಪಿಡುಗು ಎಷ್ಟು ಕೆಟ್ಟರೀತಿಯಲ್ಲಿ ನೆಲೆಯೂರಿದೆ ಎನ್ನುವುದಕ್ಕೆ ಉದಾಹರಣೆ ಜಾರ್ಖಾಂಡ್ನ ಛಾತ್ರದಲ್ಲಿರುವ ಈ ಗ್ರಾಮವೇ ಸಾಕ್ಷಿ..
ಅನ್ಯಜಾತಿ ಯುವಕನ ಜೊತೆ ಮದುವೆ
ಇತ್ತೀಚೆಗೆ ಮಗಳು ಅಥವಾ ಮಗ ಅನ್ಯ ಜಾತಿಯವರನ್ನು ವರಸಿಕೊಂಡಿದ್ದೇ ಸಾಕು, ರಾತ್ರೋ ರಾತ್ರಿ ಅಥವಾ ಹಾಡಹಗಲೇ ಕೊಲೆಯಾಗಿರುತ್ತಾರೆ. ಈ ಮಧ್ಯೆ ಜಾರ್ಖಂಡ್ನಲ್ಲಿ ಕುಟುಂಬವೊಂದು ಮಗಳು ಬೇರೊಬ್ಬ ಜಾತಿಯ ಯುವಕನನ್ನು ಮದುವೆಯಾಗಿದ್ದಕ್ಕೆ ಆಕೆ ಬದುಕಿದ್ದಾಗಲೇ ಶ್ರಾದ್ಧ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಬದುಕಿದ್ದಾಗಲೇ ಮಗಳ ಶ್ರಾದ್ಧ
21 ವರ್ಷದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳು, ತಾನು ನೆಚ್ಚಿಕೊಂಡ ಜಾರ್ಖಂಡ್‌ನ ಕುಶ್ವಾಹ (ಒಬಿಸಿ) ಎಂದು ವರ್ಗೀಕರಿಸಲಾದ ಡಾಂಗಿ ಸಮುದಾಯದ ಅಗ್ನಿವೀರ್ ಸೈನಿಕನನ್ನು ವಿವಾಹವಾದಳು. ಇದರಿಂದ ಸಿಟ್ಟಾದ ಪೋಷಕರು ಆಕೆಯ ಭಾವಚಿತ್ರವಿರುವ ಪ್ರತಿಮೆಯೊಂದಿಗೆ ಅಂತ್ಯಕ್ರಿಯೆಯ ಮೆರವಣಿಗೆಯನ್ನು ನಡೆಸಿದರು, ಪ್ರತಿಮೆಯನ್ನು ದಹನ ಮಾಡಿದರು ಮತ್ತು ಶ್ರದ್ಧಾ ಮತ್ತು ಪಿಂಡ ದಾನ ವಿಧಿಗಳನ್ನು ನಡೆಸಿರುವ ವಿಡಿಯೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ನಾವು ಬ್ರಾಹ್ಮಣರು. ಈಗ ಮಗಳು ಒಬಿಸಿ ಸಮುದಾಯದ ಯುವಕನನ್ನು ಮದುವೆಯಾಗಿದ್ದಾಳೆ. ಸಮಾಜ ನಮ್ಮನ್ನು ನೋಡುವ ರೀತಿ ಏನಾಗುತ್ತದೆ ಹೇಳಿ. ನಮಗೆ ಅವಳು ಅಗ್ನಿವೀರ್ ಸೈನಿಕನನ್ನು ಮದುವೆಯಾಗುತ್ತಿದ್ದಾಳೆ. ಪ್ರೀತಿಸುತ್ತಿದ್ದಾಳೆ ಎನ್ನುವ ವಿಚಾರ ಗೊತ್ತಿರಲಿಲ್ಲ. ನಾವು ಆಕೆಗೆ 5 ಲಕ್ಷ ರೂ ಖರ್ಚು ಮಾಡಿ ಬ್ರಾಹ್ಮಣ ಯುವಕನೊಂದಿಗೆ ಮದುವೆ ಮಾಡಲು ನಿಶ್ಚಯ ಮಾಡಿದ್ದೆವು ಎಂದು ಹೇಳಿಕೊಂಡಿದ್ದಾರೆ ಯುವತಿಯ ತಂದೆ
ಪೊಲೀಸರು ಏನಂದ್ರು?
ಈ ಬಗ್ಗೆ ಗಿಧೌರ್ ಪೊಲೀಸ್ ಠಾಣೆಯ ಉಸ್ತುವಾರಿ ಪುರುಷೋತ್ತಮ ಅಗ್ನಿಹೋತ್ರಿ ಮಾತನಾಡಿ, ಯುವತಿ ಹಾಗೂ ಯುವಕನನ್ನು ಪತ್ತೆ ಹಚ್ಚಿ ಸ್ಟೇಷನ್ಗೆ ಕರೆತಂದೆವು. ಆಕೆ ತಾನಾಗಿಯೇ ಆತನೊಂದಿಗೆ ಓಡಿ ಹೋಗಿದ್ದಾಗಿ, ಇಷ್ಟಪಟ್ಟು ಮದುವೆ ಮಾಡಿಕೊಂಡಿದ್ದಾಗಿ ಹೇಳಿದ್ದಾಳೆ. ಯಾರ ಮೇಲೆಯೂ ಆರೋಪ ಮಾಡದ ಕಾರಣ ಯುವಕನ ಮೇಲೆ ಕೇಸ್ ದಾಖಲಿಸಿಕೊಂಡಿಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಆಕೆ ಕುಟುಂಬಸ್ಥರಿಗೆ ಎಚ್ಚರಿಕೆ ಕೊಟ್ಟಿದ್ದಾಳೆ ಮದುವೆ ಬೇಡ ಎಂದು ಒತ್ತಡ ಹೇರಿದರೆ, ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್).