ಪ್ರದೀಪ್ ಕೆಲವು ತಿಂಗಳ ಹಿಂದೆಯಷ್ಟೇ ತನ್ನ ಮೊದಲ ಪತ್ನಿಯಿಂದ ದೂರವಾಗಿ, ಎರಡನೇ ಮದುವೆ ಕೂಡ ಆಗಿದ್ದ. ಮೊದಲ ಹೆಂಡತಿಯ ಮಗಳು ಮತ್ತು ಎರಡನೇ ಹೆಂಡತಿಯೊಂದಿಗೆ ವಾಸಿಸುತ್ತಿದ್ದ ಪ್ರದೀಪ್ ತೀವ್ರ ಮನನೊಂದು ಸಾಯುವಂತ ಪರಿಸ್ಥಿತಿ ಏನಾಗಿತ್ತು? ಅಲ್ಲಿ ಆಗಿದ್ದಾದರೂ ಏನು? ಎಂದು ತಿಳಿಯಲು ಮುಂದಾದ ಖಾಕಿ, ಆತ ಆತ್ಮಹತ್ಯೆಗೂ ಮುನ್ನ ಹರಿಬಿಟ್ಟಿದ್ದ ವಿಡಿಯೊ ಪರಿಶೀಲಿಸಿದರು. ಇದರಲ್ಲಿ, ಪ್ರದೀಪ್ ನನಗೆ ಸಾಯುವುದಕ್ಕೆ ಭಯವಿದೆ. ಆದ್ರೆ, ಸಾಯದೆ ಬೇರೆ ದಾರಿ ಇಲ್ಲ. ನನ್ನ ಎರಡನೇ ಪತ್ನಿ ಹಾಗೂ ತಾಯಿ ಸೇರಿ ಕುಟುಂಬದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.