ಮುಳ್ಳಿನ ದಾರಿ, ಕಾಡು ರಸ್ತೆ ದಾಟಿ ಬಂದ ಮಹಿಳೆ ಪೊಲೀಸ್ ಠಾಣೆ ತಲುಪುವ ಹೊತ್ತಿಗೆ ರಾತ್ರಿ ಸುಮಾರು 10 ಗಂಟೆಯಾಗಿತ್ತು. ಮಂಗೀಬಾಯಿ ಅವರ ಸ್ಥಿತಿ ಕಂಡ ಪೊಲೀಸರಿಗೆ ದಿಗ್ಭ್ರಮೆಯಾಗಿ, ಮೊದಲು ಕುತ್ತಿಗೆಯಲ್ಲಿ ಬೀಗ ಹಾಕಿದ ಸರಪಳಿ ತೆಗೆದು ವೈದ್ಯಕೀಯ ತಪಾಸಣೆಗೆ ಕಳುಹಿಸಿದ್ದಾರೆ. ವೈದ್ಯಕೀಯ ವರದಿಯಲ್ಲಿ ಆಕೆಯ ದೇಹದ ಮೇಲಿನ ಗಾಯಗಳು ಮತ್ತು ಬರೆ ಎಳೆದ ಗುರುತುಗಳು ದೃಢಪಟ್ಟಿವೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಗ್ರಾಮಕ್ಕೆ ಧಾವಿಸಿ ಆರೋಪಿ ಪತಿ ಸರ್ದಾರ್ ಸಿಂಗ್ ತನ್ವರ್‌ನನ್ನು ಬಂಧಿಸಿದ್ದಾರೆ, (ಏಜೆನ್ಸೀಸ್).