ಬಾರಾಮತಿ ಉಪಚುನಾವಣೆ: 2.18 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿ ಮಹಾರಾಷ್ಟ್ರ ಡಿಸಿಎಂ ಸುನೇತ್ರಾ ಪವಾರ್ | Sunetra Pawar

ಅಜಿತ್ ಪವಾರ್ ಮತ್ತು ಸುನೇತ್ರಾ ಪವಾರ್
ಅಜಿತ್ ಪವಾರ್ ಮತ್ತು ಸುನೇತ್ರಾ ಪವಾರ್
Published on
ಪುಣೆ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನಿಧನ ಹಿನ್ನೆಲೆ ನಡೆದಿದ್ದ ಬಾರಮತಿ ಉಪಚುನಾವಣೆಯಲ್ಲಿ ಅವರ ಪತ್ನಿ ಡಿಸಿಎಂ ಸುನೇತ್ರಾ ಪವಾರ್ ಅವರು 2.18 ಲಕ್ಷ ಮತಗಳ ಅಂತರದಿಂದ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.
ಉಪ ಚುನಾವಣೆಯಲ್ಲಿ ಸುನೇತ್ರಾ ಪವಾರ್ ಅವರಿಗೆ ಯಾವುದೇ ಪ್ರಮುಖ ವಿರೋಧ ಸವಾಲು ಎದುರಾಗಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಆಕಾಶ್ ಮೋರೆ ಹಿಂದೆ ಸರಿದ ನಂತರ, ಒಟ್ಟು 23 ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದರು. ಎಲ್ಲಾ ಅಭ್ಯೆರ್ಥಿಗಳು ಟೇವಣಿ ಕಳೆದುಕೊಂಡಿದ್ದು, ಸುನೇತ್ರಾ ಅವರು ಏಕಪಕ್ಷೀಯವಾಗಿ ಗೆಲುವು ಸಾಧಿಸಿದ್ದಾರೆ.
ತಮ್ಮ ಗೆಲುವಿನ ಕುರಿತು ಪ್ರತಿಕ್ರಿಯಿಸಿರುವ ಸುನೇತ್ರಾ ಪವಾರ್, ಬಾರಾಮತಿಯ ಜನರ ಅಗಾಧ ಬೆಂಬಲಕ್ಕೆ ಧನ್ಯವಾದ. ಅಜಿತ್ ಪವಾರ್ ಅವರ ನಿಧನದ ನಂತರದ ಮೊದಲ ಚುನಾವಣೆ ಇದಾಗಿರುವುದರಿಂದ ಈ ಜನಾದೇಶವು ತುಂಬಾ ಭಾವನಾತ್ಮಕವಾಗಿದೆ. ಈ ಗೆಲುವನ್ನು ಕೇವಲ ರಾಜಕೀಯ ಯಶಸ್ಸು ಎಂದು ಪರಿಗಣಿಸದೆ, ಅವರ ಕೆಲಸ ಮತ್ತು ಪರಂಪರೆಗೆ ಸಲ್ಲಿಸಿದ ಗೌರವ ಎಂದು ಅವರು ಬಣ್ಣಿಸಿದ್ದಾರೆ.
ಅಜಿತ್ ಪವಾರ್ ಅವರ ದೃಷ್ಟಿಕೋನ, ಮೌಲ್ಯಗಳು ಹಾಗೂ ಜನರೊಂದಿಗಿನ ಸಂಪರ್ಕವು ತಮ್ಮನ್ನು ಮುಂದೆಯೂ ಮಾರ್ಗದರ್ಶನ ಮಾಡುತ್ತದೆ. ರೈತರು, ಯುವಕರು, ಮಹಿಳೆಯರು ಮತ್ತು ಉದ್ಯಮಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಪರವಾಗಿ ಕೆಲಸ ಮಾಡುತ್ತೇನೆ. ಗೆಲುವಿಗಾಗಿ ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಮೈತ್ರಿಕೂಟದ ಪಾಲುದಾರರ ಪ್ರಯತ್ನಗಳಿಗೆ ಧನ್ಯವಾದ ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net