ಭಾರತದಂತಹ ದೊಡ್ಡ ಮಾರುಕಟ್ಟೆಯಲ್ಲಿ ಸಣ್ಣ ಮುಖಬೆಲೆಯ ನೋಟುಗಳ ಅಗತ್ಯತೆ ಸದಾ ಇರುತ್ತದೆ. ಡಿಜಿಟಲ್ ಪಾವತಿ ಹೆಚ್ಚಾಗುತ್ತಿದ್ದರೂ, ಗ್ರಾಮೀಣ ಪ್ರದೇಶಗಳು ಮತ್ತು ಬೀದಿ ಬದಿ ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸಲು ಚಿಲ್ಲರೆ ಹಣದ ಅನಿವಾರ್ಯತೆ ಇದೆ. "ಈ ಸೌಲಭ್ಯವು ಮಧ್ಯಮ ಮತ್ತು ಕೆಳವರ್ಗದ ಜನರ ದೈನಂದಿನ ಜೀವನವನ್ನು ಸುಲಭಗೊಳಿಸಲಿದೆ. ಬ್ಯಾಂಕ್ಗಳಿಗೆ ಹೋಗಿ ಚಿಲ್ಲರೆ ಪಡೆಯುವ ಕಷ್ಟ ತಪ್ಪಲಿದೆ," ಎಂದು ಬ್ಯಾಂಕಿಂಗ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್).