ಪಾಟ್ನಾದ ಎಎನ್ ಕಾಲೇಜಿನಲ್ಲಿ ಬಿಗಿ ಭದ್ರತೆಯ ನಡುವೆ ಇಂದು(ಆ. 03) ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು, ಈಗ 12 ಸುತ್ತು ಮುಗಿದ್ದು, ವಿಜೇತರನ್ನು ನಿರ್ಧರಿಸಲು ಒಟ್ಟು 31 ಸುತ್ತುಗಳನ್ನು ನಿಗದಿಪಡಿಸಲಾಗಿದೆ. ಚುನಾವಣಾ ತಂತ್ರಜ್ಞರಾಗಿ ಹೆಸರು ಮಾಡಿದ್ದ ಪ್ರಶಾಂತ್ ಕಿಶೋರ್ 23,756 ಮತಗಳನ್ನು ಪಡೆದರೆ, ಸಿನ್ಹಾ 17,110 ಮತಗಳನ್ನು ಪಡೆದಿದ್ದಾರೆ. ಆರ್‌ಜೆಡಿಯ ರೇಖಾ ಗುಪ್ತಾ 4,850 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.