2.8 ಕೆಜಿ ಚಿನ್ನ ಎಗರಿಸಿ ಆನ್‌ಲೈನ್ ಬೆಟ್ಟಿಂಗ್ ಆಡಿದ Bank Manager!

Bank Manager
Bank Manager
Published on

ಬೆಂಗಳೂರು:ಬ್ಯಾಂಕಿನಲ್ಲಿ ಸುರಕ್ಷಿತವಾಗಿರಲಿ ಎಂದು ಗ್ರಾಹಕರು ಇಟ್ಟಿದ್ದಬರೋಬ್ಬರಿ 2,780 ಗ್ರಾಂ ಚಿನ್ನಾಭರಣಗಳನ್ನು ಅಕ್ರಮವಾಗಿ ಗಿರವಿ ಇಟ್ಟು, ಹಣವನ್ನು ಆನ್ಲೈನ್ ಬೆಟ್ಟಿಂಗ್ಗೆಬಳಸಿದ ಉಪ ವ್ಯವಸ್ಥಾಪಕನನ್ನು (Bank Manager) ಪೊಲೀಸರು ಬಂಧಿಸಿದಘಟನೆ ಸಿಲಿಕಾನ್ ಸಿಟಿಯಗಿರಿನಗರದಲ್ಲಿ ನಡೆದಿದೆ.

ಬಂಧಿತಆರೋಪಿಯು ಗಿರಿನಗರದ ಖಾಸಗಿ ಬ್ಯಾಂಕೊಂದರಲ್ಲಿ ಉಪ ವ್ಯವಸ್ಥಾಪಕನಾಗಿ ಕೆಲಸಮಾಡುತ್ತಿದ್ದ. ಫೆಬ್ರವರಿ 5 ರಂದು ಬ್ಯಾಂಕಿನ ಮುಖ್ಯವ್ಯವಸ್ಥಾಪಕರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಬೃಹತ್ ವಂಚನೆ ಬೆಳಕಿಗೆ ಬಂದಿದೆ.

ಪೊಲೀಸರತನಿಖೆಯ ಪ್ರಕಾರ, ಆರೋಪಿಯು ಮೇಲಧಿಕಾರಿಗಳ ಗಮನಕ್ಕೆ ತರದೆ ಬ್ಯಾಂಕ್ ಲಾಕರ್ನಲ್ಲಿದ್ದ ಗ್ರಾಹಕರ 2,780 ಗ್ರಾಂ (ಸುಮಾರು 2.8 ಕೆಜಿ) ಚಿನ್ನಾಭರಣಗಳನ್ನು ಕದ್ದು, ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಗಿರವಿ ಇಟ್ಟಿದ್ದ ಎನ್ನಲಾಗಿದೆ. ಚಿನ್ನದ ಒಟ್ಟುಮೌಲ್ಯ ಅಂದಾಜು 3.5 ಕೋಟಿ ರೂಪಾಯಿಗಳಿಗೂ ಅಧಿಕಎಂದು ಹೇಳಲಾಗಿದೆ.

ಆನ್ಲೈನ್ ಬೆಟ್ಟಿಂಗ್ ಚಟಕ್ಕೆ ಬಲಿಯಾದ ವ್ಯವಸ್ಥಾಪಕ

ಪ್ರಾಥಮಿಕತನಿಖೆಯ ವೇಳೆ ಆರೋಪಿಯು ಕೋಟ್ಯಂತರ ರೂಪಾಯಿಗಳನ್ನು ಎಲ್ಲಿ ಬಳಸಿದ್ದಾನೆ ಎಂಬ ಬೆಚ್ಚಿಬೀಳಿಸುವ ಸತ್ಯಹೊರಬಿದ್ದಿದೆ. ಗಿರವಿ ಇಟ್ಟ ಹಣವನ್ನು ಆರೋಪಿಆನ್ಲೈನ್ ಬೆಟ್ಟಿಂಗ್ (Online Betting) ಆಟಗಳಿಗೆ ಸುರಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಕೇವಲ ವೈಯಕ್ತಿಕ ದುರಾಸೆ ಮತ್ತು ವ್ಯಸನಕ್ಕಾಗಿ ಗ್ರಾಹಕರ ಆಸ್ತಿಯನ್ನು ಬಲಿ ನೀಡಿದ್ದಾನೆ.

ಪೊಲೀಸ್ಕಾರ್ಯಾಚರಣೆ ಮತ್ತು ಡಿಸಿಪಿ ಹೇಳಿಕೆ

ಪ್ರಕರಣದ ಕುರಿತು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ಅವರುಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. "ಆರೋಪಿ ಡೆಪ್ಯುಟಿ ಮ್ಯಾನೇಜರ್ನನ್ನು ಬಂಧಿಸಲಾಗಿದೆ. ಈವರೆಗೆ ಸುಮಾರು 700 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಉಳಿದ ಚಿನ್ನವನ್ನು ಮರಳಿಪಡೆಯಲು ತನಿಖೆ ಮುಂದುವರಿದಿದೆ. ಆದರೆ, ಚಿನ್ನವನ್ನು ಪಡೆದ ಫೈನಾನ್ಸ್ ಕಂಪನಿಗಳುತನಿಖೆಗೆ ಸರಿಯಾದ ಸಹಕಾರ ನೀಡುತ್ತಿಲ್ಲ. ನಾವು ನ್ಯಾಯಾಲಯದ ಮೊರೆಹೋಗಲಿದ್ದು, ಅಂತಹ ಕಂಪನಿಗಳ ವಿರುದ್ಧವೂಕಾನೂನು ಕ್ರಮ ಕೈಗೊಳ್ಳುತ್ತೇವೆ."

ಗ್ರಾಹಕರಿಗೆಎಚ್ಚರಿಕೆ

ಘಟನೆಯು ಬ್ಯಾಂಕ್ ಲಾಕರ್ಗಳ ಸುರಕ್ಷತೆಯ ಬಗ್ಗೆದೊಡ್ಡ ಪ್ರಶ್ನೆಯನ್ನು ಎತ್ತಿದೆ. ಹಿನ್ನೆಲೆಯಲ್ಲಿ ಪೊಲೀಸರುಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ. ಬ್ಯಾಂಕ್ ಲಾಕರ್ನಲ್ಲಿ ನೀವು ಇಟ್ಟಿರುವ ಆಭರಣಗಳುಸುರಕ್ಷಿತವಾಗಿವೆಯೇ ಮತ್ತು ಅವುಗಳ ಸ್ಥಿತಿಗತಿ ಏನಿದೆ ಎಂಬುದನ್ನು ಕಾಲಕಾಲಕ್ಕೆ ಬ್ಯಾಂಕ್ಗೆ ಭೇಟಿ ನೀಡಿಪರಿಶೀಲಿಸಿಕೊಳ್ಳುವಂತೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net