ಐಪಿಎಲ್​ನಿಂದ ಪಾಕಿಗಳಂತೆ ಬಾಂಗ್ಲಾ ಆಟಗಾರರನ್ನು ನಿಷೇಧಿಸಬೇಕು: ಬಿಜೆಪಿ ನಾಯಕ | Bangla players

ಪಶ್ಚಿಮ ಬಂಗಾಳ ಬಿಜೆಪಿ ನಾಯಕ ದಿಲೀಪ್ ಘೋಷ್
ಪಶ್ಚಿಮ ಬಂಗಾಳ ಬಿಜೆಪಿ ನಾಯಕ ದಿಲೀಪ್ ಘೋಷ್
Published on
ಕೋಲ್ಕತ್ತಾ: ಕೆಕೆಆರ್​ ತಂಡದಿಂದ ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೈಬಿಟ್ಟಿದ್ದನ್ನು ಪಶ್ಚಿಮ ಬಂಗಾಳ ಬಿಜೆಪಿ ನಾಯಕ ದಿಲೀಪ್ ಘೋಷ್ ಸ್ವಾಗತಿಸಿದ್ದು, ಪಾಕಿಸ್ತಾನಿಗಳಂತೆ ಬಾಂಗ್ಲಾ ಆಟಗಾರರನ್ನು(Bangla players) ಐಪಿಎಲ್​ನಿಂದ ಬ್ಯಾನ್ ಮಾಡಬೇಕು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಬಾಂಗ್ಲಾದೇಶದಲ್ಲಿ ಅಲ್ಲಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಒಳ್ಳೆಯದಲ್ಲ. ಭಾರತ ಸರ್ಕಾರ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದರೂ, ಪಶ್ಚಿಮ ಬಂಗಾಳದ ಜನರು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಂದ ತೀವ್ರವಾಗಿ ನೊಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಪಾಕಿಸ್ತಾನದ ಕ್ರಿಕೆಟ್ ಆಟಗಾರರಿಗೆ ಆಡಲು ಅವಕಾಶವಿಲ್ಲದಂತೆಯೇ, ಬಾಂಗ್ಲಾದೇಶದ ಆಟಗಾರರಿಗೂ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.
ದೇಶದ ಅತ್ಯುನ್ನತ ಕ್ರಿಕೆಟ್ ಆಡಳಿತ ಮಂಡಳಿಯಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸೂಚನೆಯಂತೆ, ಕೆಕೆಆರ್ ಆಡಳಿತ ಮಂಡಳಿ ಶನಿವಾರ ಮುಸ್ತಾಫಿಜುರ್ ಅವರನ್ನು 2026 ರ ಐಪಿಎಲ್ ತಂಡದಿಂದ ಬಿಡುಗಡೆ ಮಾಡಿದ್ದು, ಕ್ರಿಕೆಟ್ ವಲಯದಲ್ಲಿ ರಾಷ್ಟ್ರವ್ಯಾಪಿ ವಿವಾದಕ್ಕೆ ಕಾರಣವಾಗಿದೆ. ಐಪಿಎಲ್ ಹರಾಜಿನ ಸಂದರ್ಭದಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೆಕೆಆರ್​ 9.2 ಕೋಟಿ ರೂ.ಗೆ ಖರೀದಿಸಿತ್ತು.

ಮುಸ್ತಾಫಿಜುರ್ ರೆಹಮಾನ್ ಬಿಡುಗಡೆ ಬಾಂಗ್ಲಾ ಕಿಡಿ

ಇನ್ನೂ ಐಪಿಎಲ್​ನಿಂದ ಏಕೈಕ ಬಾಂಗ್ಲಾ ಆಟಗಾರರನ್ನು ಕೈಬಿಟ್ಟಿದ್ದರಿಂದ ಕಿಡಿಕಾರಿರುವ ಬಾಂಗ್ಲಾ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(BCB) ಮುಂಬರುವ T20 ವಿಶ್ವಕಪ್‌ಗಾಗಿ ತನ್ನ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ICCಗೆ ಅಧಿಕೃತವಾಗಿ ತಿಳಿಸಿದೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್, ಭಾರತವು ಒಬ್ಬ ಗುತ್ತಿಗೆ ಆಟಗಾರನ ಸುರಕ್ಷತೆಯನ್ನು ಖಾತರಿಪಡಿಸಲು ಸಾಧ್ಯವಾಗದಿದ್ದರೆ, ಅವರು ನಮ್ಮ ಇಡೀ ರಾಷ್ಟ್ರೀಯ ತಂಡದ ಸುರಕ್ಷತೆಯನ್ನು ಖಾತರಿಪಡಿಸಲು ಸಾಧ್ಯವಿಲ್ಲ. ಈಗಾ ಗುಲಾಮಗಿರಿಯ ದಿನಗಳು ಮುಗಿದಿವೆ ಎಂದು ಭಾರತದ ವಿರುದ್ಧ ಕಿಡಿಕಾರಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net