ಬಾಂಗ್ಲಾದೇಶೀಯರ ಈ ಪಾಕಿಸ್ತಾನಿ ಪ್ರೀತಿ ಮತ್ತು ಭಾರತ&ದ್ವೇಷ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡದಾಗಿ ಬೆಳೆಯಲಿದೆ. ಭಾರತದ ಬಗ್ಗೆ ಸದ್ಭಾವನೆ ಹೊಂದಿರುವ ಶೇಖ್ ಹಸೀನಾ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ. ಜತೆಗೆ ಅವರ ಅವಾಮಿ ಲೀಗ್ ಪವನ್ನು ಚುನಾವಣಾ ರಾಜಕಾರಣದಿಂದಲೇ ಹೊರಗೆ ಹಾಕುವ ಪಿತೂರಿಯನ್ನೂ ಯೂನುಸ್ ಮಾಡುತ್ತಿದ್ದಾರೆ. ಮುಂದಿನ ಫೆಬ್ರವರಿಯಲ್ಲಿ ಚುನಾವಣೆಗಳು ನಡೆದರೆ ಭಾರತ&ವಿರೋಧಿ ಬೇಗಂ ಖಲೀದಾ ಜಿಯಾರ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಈಗಿನ ಯೂನುಸ್ ಸರ್ಕಾರ ಮುಂದುವರಿದರೂ ಸರಿ, ಖಲೀದಾ ಪ್ರಧಾನಿಯಾದರೂ ಸರಿ, ಅವರ ಜುಟ್ಟು ಮೂಲಭೂತವಾದಿ ಯುವಜನರ ಕೈಯಲ್ಲಿರುತ್ತದೆ. ಅವರ ಮನಸ್ಸೀಡಿ ತುಂಬಿರುವುದು ಭಾರತ&ದ್ವೇಷ, ಹಿಂದೂ&ದ್ವೇಷ. ಬದಲಿಗೆ ಅವರು ಸಖ್ಯ, ಸಹಕಾರ ಬಯಸುವುದು ಪಾಕಿಸ್ತಾನದ ಜಿಹಾದಿ ಸೇನೆಯೊಂದಿಗೆ, ಪಾಕಿಸ್ತಾನಿ ಭಯೋತ್ಪಾದಕರೊಂದಿಗೆ! ಇದೆಲ್ಲದರ ಅರ್ಥ ಬಾಂಗ್ಲಾದೇಶ ಮತ್ತೆ ಪೂರ್ವ ಪಾಕಿಸ್ತಾನವಾಗುತ್ತಿದೆ! ಭಾರತ ಈ ವಾಸ್ತವವನ್ನು ಒಪ್ಪಿಕೊಳ್ಳಬೇಕಾಗಿದೆ ಮತ್ತು ಅದಕ್ಕೆ ಅನುಗುಣವಾಗಿ ತನ್ನ ನೀತಿಗಳನ್ನು ಮಾರ್ಪಡಿಸಿಕೊಳ್ಳಬೇಕಾಗಿದೆ.