ಬುಧವಾರ ರೇಷ್ಮಾ ಅವರು ಲಕ್ಷ್ಮಣಪುರ ಮಟೇಹಿ ಗ್ರಾಮದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಾದ ರಹೀಸ್, ಆಕೆಯೊಂದಿಗೆ ಜಗಳವಾಡಿದ್ದಾನೆ. ವಾಗ್ವಾದ ವಿಕೋಪಕ್ಕೆ ತಿರುಗುತ್ತಿದ್ದಂತೆ ರಹೀಸ್ ಮೊದಲು ತನ್ನ ಬೈಕ್‌ನಿಂದ ಆಕೆಗೆ ಗುದ್ದಿದ್ದಾನೆ. ನಂತರ ಆಕೆ ಕೆಳಗೆ ಬೀಳುತ್ತಿದ್ದಂತೆ ಬೈಕ್‌ಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.