ಸೇನೆಯಲ್ಲಿ ಹಲವಾರು ಗಮನಾರ್ಹ ಸುಧಾರಣೆಗಳನ್ನು ಜಾರಿಗೊಳಿಸಿದ್ದಲ್ಲದೆ ಮೃತ ಯೋಧರ ಕುಟುಂಬಗಳಿಗೆ ಪರಿಹಾರ, ಜಮೀನು, ಗೃಹ ನಿರ್ವಣಕ್ಕೆ ಅವಕಾಶ, ವಿಧವಾ ವೇತನ, ಪಿಂಚಣಿ ಸೌಲಭ್ಯ, ವಿಕಲಾಂಗ ಯೋಧರಿಗೆ ಸರ್ಕಾರಿ ಸೇವೆ ಅಥವಾ ಪರಿಹಾರ ಸೌಲಭ್ಯ ಇತ್ಯಾದಿ ಕಲ್ಪಿಸಿಕೊಡುವ ಮೂಲಕ ತಾವೊಬ್ಬ ಹೃದಯವಂತ ರಕ್ಷಣಾ ಸಚಿವರೆಂಬುದನ್ನು ಸಾಬೀತುಪಡಿಸಿದರು. ಸೈನಿಕರಲ್ಲಿ ಧೈರ್ಯ ತುಂಬಲು ಗಡಿಭಾಗಕ್ಕೂ ಭೇಟಿ ನೀಡಿದ ಧೈರ್ಯವಂತರು. ಅವರ ಸಾಧನೆಗೆ ಅಂದಿನ ರಾಷ್ಟ್ರಾಧ್ಯಕ್ಷ ವಿ.ವಿ. ಗಿರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲಿಪ್ತ ನೀತಿ ಅನುಸರಿಸುವ, ಸಹೋದರ ಭಾವ ಹೊಂದಿರುವ, ಶಾಂತಿ-ಸ್ನೇಹಕ್ಕೆ ಹೆಸರಾದ ಭಾರತ ತನ್ನ ಗಡಿಭಾಗಗಳಲ್ಲಿ ಶತ್ರು ರಾಷ್ಟ್ರಗಳನ್ನು ಹೊಂದಿಯೂ ಅತ್ಯಂತ ಬಲಿಷ್ಠವಾಗಿ ಬೆಳೆದಿರುವುದಕ್ಕೆ ಬಾಬೂಜಿ ಪ್ರಮುಖ ಕಾರಣ.