ಮುಂದುವರೆದು ಮಾತನಾಡಿದ ಷಾ, ದೀದಿ, ಬಂಗಾಳದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ಇಲ್ಲಿ ಬಾಬರಿ ಮಸೀದಿ ನಿರ್ಮಿಸಲು ನಾವು ಎಂದಿಗೂ ಬಿಡುವುದಿಲ್ಲ. ಹುಮಾಯೂನ್ ಕಬೀರ್ ಎಂಬುವವರು ದೀದಿಯ ಆದೇಶದಂತೆ ಈ ಕೆಲಸ ಮಾಡುತ್ತಿದ್ದಾರೆ. ಆದರೆ ನಿಮ್ಮ ಸಮಯ ಮುಗಿದಿದೆ ಎಂದು ಎಚ್ಚರಿಸಿದ್ದಾರೆ. ಪಶ್ಚಿಮ ಬರ್ಧಮಾನ್ ಜಿಲ್ಲೆಯ ರಾಣಿಗಂಜ್‌ನಲ್ಲಿ ನಡೆದ ಮತ್ತೊಂದು ಱಲಿಯಲ್ಲೂ ಇದೇ ವಿಷಯವನ್ನು ಪುನರುಚ್ಚರಿಸಿದ ಷಾ, ಮಮತಾ ಮತ್ತು ಹುಮಾಯೂನ್ ಕಬೀರ್ ಇಬ್ಬರೂ ಒಂದೇ ಅಚ್ಚಿನವರು ಎಂದು ಲೇವಡಿ ಮಾಡಿದ್ದಾರೆ.