ಯುಗಾಂತ್ಯದ ಬೆನ್ನಲ್ಲೇ ಗೂಢ ಸಂದೇಶ: 'ಅಲ್ಲಾಹನಿಗೆ ನೀಡಿದ ಪ್ರತಿಜ್ಞೆ ಈಡೇರಿದೆ' ಎಂದ ಖಮೇನಿ ಅಂತಿಮ ಪೋಸ್ಟ್! Ayatollah Ali Khamenei

Ayatollah Ali Khamenei (ಚಿತ್ರ X)
Ayatollah Ali Khamenei (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (86) ನಿಧನರಾಗಿದ್ದಾರೆ
  • ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸಿದ ಜಂಟಿ ರಹಸ್ಯ ಕಾರ್ಯಾಚರಣೆಯಲ್ಲಿ ಖಮೇನಿ ಹತರಾಗಿದ್ದಾರೆ
  • ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬರಾದ ಖಮೇನಿ ಈಗ ಬದುಕಿಲ್ಲ
  • ಅಮೆರಿಕದ ಅತ್ಯಾಧುನಿಕ ಇಂಟೆಲಿಜೆನ್ಸ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಖಮೇನಿಗೆ ಸಾಧ್ಯವಾಗಲಿಲ್ಲ
Ayatollah Ali Khamenei: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (86) ನಿಧನರಾಗಿದ್ದಾರೆ ಎಂದು ಇರಾನ್​ ಮಾಧ್ಯಮಗಳು ಘೋಷಿಸಿದ ನಂತರ ಇಡೀ ಜಗತ್ತು ದಿಗ್ಭ್ರಮೆಗೊಂಡಿದೆ. ಈ ಬೆಳವಣಿಗೆಯು ಕೇವಲ ಒಂದು ರಾಷ್ಟ್ರದ ನಾಯಕನ ಅಂತ್ಯವಲ್ಲದೆ, ಜಾಗತಿಕ ಮಾರುಕಟ್ಟೆ ಮತ್ತು ರಾಜತಾಂತ್ರಿಕ ವಲಯದಲ್ಲಿ ಸುನಾಮಿಯನ್ನೇ ಎಬ್ಬಿಸಿದೆ.

ಘಟನೆಯ ಹಿನ್ನೆಲೆ

ಆದಾಗ್ಯೂ, ಇರಾನ್​ನ ಅಧೀಕೃತ ಮಾಧ್ಯಮಗಳು ಖಮೇನಿ ಅವರ ನಿಧನವನ್ನು ಘೋಷಿಸಿದರೂ, ಸಾವಿನ ನಿಖರ ಕಾರಣದ ಬಗ್ಗೆ ಆರಂಭದಲ್ಲಿ ಮೌನವಹಿಸಿದ್ದವು. ಈ ಘಟನೆಯು ಹಲವಾರು ವದಂತಿಗಳಿಗೆ ಎಡೆಮಾಡಿಕೊಟ್ಟಿತು. ಆದರೆ, ಘೋಷಣೆಯಾದ ಕೆಲವೇ ಗಂಟೆಗಳ ಮೊದಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಇರಾನ್ ನಾಯಕತ್ವವನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸಿದ ಜಂಟಿ ರಹಸ್ಯ ಕಾರ್ಯಾಚರಣೆಯಲ್ಲಿ ಖಮೇನಿ ಹತರಾಗಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದರು.

ಖಮೇನಿ ಕೊನೆಯ ಪೋಸ್ಟ್ ವೈರಲ್!

ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ಸುದ್ದಿಯನ್ನು ಅಲ್ಲಿನ ಮಾಧ್ಯಮಗಳು ಖಚಿತಪಡಿಸಿದ ಬೆನ್ನಲ್ಲೇ, ಅವರ ಅಧಿಕೃತ 'ಎಕ್ಸ್' (X) ಖಾತೆಯಲ್ಲಿ ಪ್ರಕಟವಾದ ಒಂದು ಪೋಸ್ಟ್ ಚರ್ಚೆಯನ್ನು ಹುಟ್ಟುಹಾಕಿದೆ.
ಪರಮ ದಯಾಳು, ಕರುಣಾಮಯಿ ಅಲ್ಲಾಹನ ಹೆಸರಿನಲ್ಲಿ. ನಂಬಿಕೆಯುಳ್ಳವರಲ್ಲಿ ಅಲ್ಲಾಹನಿಗೆ ತಾವು ಪ್ರತಿಜ್ಞೆ ಮಾಡಿದ್ದಕ್ಕೆ ನಿಷ್ಠರಾಗಿರುವ ಪುರುಷರು ಇದ್ದಾರೆ; ಅವರಲ್ಲಿ ತನ್ನ ಪ್ರತಿಜ್ಞೆಯನ್ನು ಪೂರೈಸಿದವನೂ ಇದ್ದಾನೆ, ಮತ್ತು ಅವರಲ್ಲಿ ಕಾಯುವವನೂ ಇದ್ದಾನೆ, ಮತ್ತು ಅವರು ಸ್ವಲ್ಪವೂ ಬದಲಾಗಿಲ್ಲ. ಈ ಪದ್ಯವು ಇಸ್ಲಾಮಿಕ್ ಸಂಸ್ಕೃತಿಯಲ್ಲಿ ಹುತಾತ್ಮತೆ, ಅಚಲ ನಂಬಿಕೆ ಮತ್ತು ದೈವಕ್ಕೆ ನೀಡಿದ ಮಾತನ್ನು ಉಳಿಸಿಕೊಳ್ಳುವ ದೃಢತೆಯನ್ನು ಪ್ರತಿನಿಧಿಸುತ್ತದೆ.
ಕ್ರೂರ ವ್ಯಕ್ತಿ ಇನ್ನಿಲ್ಲ
ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​​ ಹಂಚಿಕೊಂಡಿರುವ ಟ್ರಂಪ್​, ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬರಾದ ಖಮೇನಿ ಈಗ ಬದುಕಿಲ್ಲ ಎಂದಿದ್ದು, ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ಕಾರ್ಯಾಚರಣೆಯಲ್ಲಿ ಅವರು ಹತರಾಗಿದ್ದಾರೆ ಎಂದು ಹೇಳಿದ್ದಾರೆ.
ಅಮೆರಿಕದ ಅತ್ಯಾಧುನಿಕ ಇಂಟೆಲಿಜೆನ್ಸ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಖಮೇನಿಗೆ ಸಾಧ್ಯವಾಗಲಿಲ್ಲ. ಅವರ ಜೊತೆಗಿದ್ದ ಇತರ ನಾಯಕರು ಕೂಡ ಸಾವನ್ನಪ್ಪಿದ್ದಾರೆ. ಅವರ ಸಾವು ಕೇವಲ ಇರಾನ್ ಜನತೆಗೆ ಮಾತ್ರವಲ್ಲ, ಆತನಿಂದ ಹತ್ಯೆಗೀಡಾದ, ತೊಂದರೆ ಅನುಭವಿಸಿದ ವಿಶ್ವದ ಎಲ್ಲಾ ನಾಗರಿಕರಿಗೆ ಸಿಕ್ಕ ನ್ಯಾಯ ಎಂದು ಕರೆದಿದ್ದಾರೆ.
ಇದು ನಿಮ್ಮ ದೇಶವನ್ನು ನೀವು ಮರಳಿ ಪಡೆಯಲು ಸಿಕ್ಕಿರುವ ಅತ್ಯಂತ ದೊಡ್ಡ ಸುವರ್ಣಾವಕಾಶವಾಗಿದ್ದು, ದಶಕಗಳ ಕಾಲ ನೀವು ಸಹಾಯಕ್ಕಾಗಿ ಕೇಳುತ್ತಿದ್ದಿರಿ, ಈಗ ನಿಮ್ಮನ್ನು ರಕ್ಷಿಸುವ ಅಧ್ಯಕ್ಷ ನಿಮ್ಮೊಂದಿಗಿದ್ದಾರೆ ಎಂದು ಇರಾನ್ ಜನತೆಯನ್ನು ಉದ್ದೇಶಿಸಿ ಟ್ರಂಪ್​ ಈ ರೀತಿ ಬರೆದು ಪೋಸ್ಟ್​ ಮಾಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net