ಪಟನಾ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಬಿಹಾರದ ಆರೋಗ್ಯ ಸಚಿವ ನಿಶಾಂತ್ ಕುಮಾರ್ (Nishant Kumar) ಯೋಗದ ಪ್ರಮುಖ ಆಸನಗಳನ್ನು ಮಾಡುವಾಗ ಪ್ರದರ್ಶಿಸಿದ ವಿಚಿತ್ರ ಭಂಗಿಗಳ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರನೂ ಆಗಿರುವ ರಾಜ್ಯದ ಆರೋಗ್ಯ ಸಚಿವರ ಈ ಯೋಗದ ಎಡವಟ್ಟು ನೆಟ್ಟಿಗರಿಂದ ಲೇವಡಿಗೆ ಗುರಿಯಾಗಿದೆ.