ಪ್ರಧಾನಿ ಮೋದಿ ಸ್ಮರಣಿಕೆಗಳ ಹರಾಜು

PM Modi's mementos |ಪ್ರಧಾನಿ ಮೋದಿ ಸ್ಮರಣಿಕೆಗಳ ಹರಾಜು
PM Modi's mementos |ಪ್ರಧಾನಿ ಮೋದಿ ಸ್ಮರಣಿಕೆಗಳ ಹರಾಜು
Published on
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶ&ವಿದೇಶಗಳಿಂದ ಉಡುಗೊರೆಯಾಗಿ ಬಂದಿರುವ ಸುಮಾರು 1,500 ಸ್ಮರಣಿಕೆಗಳ ಇ&ಹರಾಜು ಪ್ರಕ್ರಿಯೆ ಸೆ. 17ರಂದು ಆರಂಭವಾಗಲಿದೆ. ಭಗವಾನ್​ ಶ್ರೀರಾಮನ ಬೆಳ್ಳಿಯ ಮೂರ್ತಿ, ಚಿನ್ನದ ಲೇಪಿತ ರಾಧಾ&ಕೃಷ್ಣ ಕಲಾಕೃತಿ ಹಾಗೂ ಐಎನ್​ಎಸ್​ ಸೂರತ್​ ಮತ್ತು ಐಎನ್​ಎಸ್​ ನೀಲಗಿರಿ ಯುದ್ಧನೌಕೆಗಳ ಮಾದರಿ ಸೇರಿದಂತೆ ಹಲವು ವಿಶೇಷ ವಸ್ತುಗಳು ಈ ಬಾರಿ ಹರಾಜಿಗೆ ಲಭ್ಯವಿವೆ. ಪ್ರಧಾನಿಯವರ 76ನೇ ಜನ್ಮದಿನದ ಹಿನ್ನೆಲೆಯಲ್ಲಿ ಸೆ. 17ರಂದು ಇ&ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ಅ. 31ರವರೆಗೆ ನಡೆಯಲಿದೆ. ಕರ್ನಾಟಕದಿಂದ ನೀಡಲಾದ ಶ್ರೀರಾಮನ ಬೆಳ್ಳಿ ಮೂರ್ತಿಗೆ 13.50 ಲಕ್ಷ ರೂ. ಆರಂಭಿಕ ಮೊತ್ತ ನಿಗದಿ ಮಾಡಲಾಗಿದೆ. ಕಾಕತೀಯ ಕಲಾ ತೋರಣದ ಬೆಳ್ಳಿಯ ಪ್ರತಿಕೃತಿಗೆ 9 ಲಕ್ಷ ರೂ ರಥವೇರಿದ ಭಗವಾನ್​ ಜಗನ್ನಾಥ ಪರಿವಾರ ವಿಗ್ರಹಕ್ಕೆ 6 ಲಕ್ಷ ರೂ ಚಿನ್ನದ ಲೇಪಿತ ರಾಧಾ&ಕೃಷ್ಣ ಕಲಾಕೃತಿಗೆ 5.40 ಲಕ್ಷ ರೂ ನಿಗದಿ ಮಾಡಲಾಗಿದೆ. ಹರಾಜಿನಿಂದ ಸಂಗ್ರಹವಾಗುವ ಸಂಪೂರ್ಣ ಹಣವನ್ನು ನಮಾಮಿ ಗಂಗೆ ಯೋಜನೆಗೆ ಬಳಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. pmmemento.gov.in ಮೂಲಕ ಹರಾಜಿನಲ್ಲಿ ಭಾಗಿಯಾಗಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net