ಹಲೋ ನಾನು ಇಲ್ಲಿದ್ದೇನೆ...ಖ್ಯಾತ ಯೂಟ್ಯೂಬರ್​ ಪತ್ನಿ ಬಸ್​ ಕಂಡಕ್ಟರ್​ ಜತೆ ಓಡಿಹೋದ ಪ್ರಕರಣಕ್ಕೆ ಹೊಸ ಟ್ವಿಸ್ಟ್! Akhil NRD ​

ಹಲೋ ನಾನು ಇಲ್ಲಿದ್ದೇನೆ...ಖ್ಯಾತ ಯೂಟ್ಯೂಬರ್​ ಪತ್ನಿ ಬಸ್​ ಕಂಡಕ್ಟರ್​ ಜತೆ ಓಡಿಹೋದ ಪ್ರಕರಣಕ್ಕೆ ಹೊಸ ಟ್ವಿಸ್ಟ್! Akhil NRD ​
ಹಲೋ ನಾನು ಇಲ್ಲಿದ್ದೇನೆ...ಖ್ಯಾತ ಯೂಟ್ಯೂಬರ್​ ಪತ್ನಿ ಬಸ್​ ಕಂಡಕ್ಟರ್​ ಜತೆ ಓಡಿಹೋದ ಪ್ರಕರಣಕ್ಕೆ ಹೊಸ ಟ್ವಿಸ್ಟ್! Akhil NRD ​
Published on

ಪ್ರಮುಖ ಮುಖ್ಯಾಂಶಗಳು

  • ಭಾರಿ ಸುದ್ದಿಯಲ್ಲಿರುವ ಮಲಯಾಳಂ ಕಂಟೆಂಟ್‌ ಕ್ರಿಯೇಟರ್‌ ಅಖಿಲ್‌ ಎನ್‌ಆರ್‌ಡಿ ಮತ್ತು ಮೇಘಾ ದಂಪತಿ
  • ಗಂಡನನ್ನು ಬಿಟ್ಟು ಬಸ್‌ ಕಂಡಕ್ಟರ್‌ ಜತೆ ಓಡಿಹೋಗಿದ್ದಾರೆಂಬ ವದಂತಿ ಬಗ್ಗೆ ಮೌನ ಮುರಿದ ಮೇಘಾ
  • ಚೆಂಗನ್ನೂರಿನ ತಂದೆಯ ಮನೆಯಲ್ಲಿದ್ದೇನೆ ಎಂದು ಫೋಟೋ ಹಂಚಿಕೊಂಡು ಸ್ಪಷ್ಟನೆ ನೀಡಿದ ಮೇಘಾ
  • ಮೇಘಾ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಟೀಕೆ
  • ಫೋಟೋಗ್ರಾಫರ್‌ ರೂಪದಲ್ಲಿ ಹೊಸ ರೀಲ್‌ ಹಂಚಿಕೊಂಡ ಅಖಿಲ್ ಎನ್‌ಆರ್‌ಡಿ ಹಾಗೂ ಮುಂದುವರಿದ ವದಂತಿ
ತಿರುವನಂತಪುರಂ: ಮಲಯಾಳಂ ಕಂಟೆಂಟ್ ಕ್ರಿಯೇಟರ್ ಅಖಿಲ್ ಎನ್‌ಆರ್‌ಡಿ ( Akhil NRD ) ಮತ್ತು ಮೇಘಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಜನಪ್ರಿಯತೆ ಪಡೆದಿರುವ ದಂಪತಿ. ಸದ್ಯ ಈ ದಂಪತಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಏಕೆಂದರೆ, ಅಖಿಲ್ ಅವರ ಪತ್ನಿ ಮೇಘಾ ಮನೆಬಿಟ್ಟು ಬಸ್​ ಕಂಡಕ್ಟರ್​ ಜತೆ ಎಸ್ಕೇಪ್​ ಆಗಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿ ಕೇರಳದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಹೊತ್ತಿನಲ್ಲೇ ಮೇಘಾ ಅವರು ಮೊದಲ ಬಾರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗಂಡನನ್ನು ಬಿಟ್ಟು ಬಸ್​ ಕಂಡಕ್ಟರ್​ ಜತೆ ಓಡಿಹೋಗಿರುವುದಕ್ಕೆ ಮೇಘಾ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಈ ಟೀಕೆಗಳಿಗೆ ಇದೇ ಮೊದಲ ಬಾರಿಗೆ ಮೇಘಾ ಮೌನ ಮುರಿದಿದ್ದಾರೆ. ಚೆಂಗನ್ನೂರಿನಲ್ಲಿರುವ ತಮ್ಮ ತಂದೆಯ ಮನೆಯಿಂದ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮ್ಮ ವಿರುದ್ಧ ಹರಿದಾಡುತ್ತಿರುವ ವದಂತಿಗಳಿಗೆ ವ್ಯತಿರಿಕ್ತವಾಗಿ, ತಾನು ಬೇರೆ ಯಾರ ಜೊತೆಯೂ ಇಲ್ಲ, ಬದಲಿಗೆ ಒಂಟಿಯಾಗಿದ್ದೇನೆ ಹಾಗೂ ನನ್ನ ತಂದೆಯ ಮನೆಯಲ್ಲಿದ್ದೇನೆ ಎಂದು ಪೋಸ್ಟ್​​ ಮಾಡಿದ್ದಾರೆ.
ಇನ್ನೂ ಈ ಪೋಸ್ಟ್‌ನ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಕೆಲವರು ಮೇಘಾ ಅವರ ಪರವಾಗಿ ನಿಂತು ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು ಟೀಕೆಗಳನ್ನು ಮಾಡುತ್ತಿದ್ದಾರೆ. ಇಷ್ಟೆಲ್ಲ ವದಂತಿಗಳು ಹರಡುತ್ತಿದ್ದರು ಆ ಬಗ್ಗೆ ಮೇಘಾ ಏಕೆ ಮಾತನಾಡುತ್ತಿಲ್ಲ. ತಂದೆಯ ಮನೆಯಲ್ಲಿ ಇದ್ದೇನೆ ಅಂತಾ ಹೇಳುವ ಮೂಲಕ ಹೊಸ ನಾಟಕ ಶುರು ಮಾಡಿದ್ದಾರೆ ಎಂದೆಲ್ಲ ಟೀಕೆಗಳನ್ನು ಮಾಡುತ್ತಿದ್ದಾರೆ.
ಅದೇ ಸಮಯದಲ್ಲಿ, ಅಖಿಲ್ ಎನ್‌ಆರ್‌ಡಿ ಅವರು ಹೊಸ ರೀಲ್ ಮೂಲಕ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋಗ್ರಾಫರ್ ರೂಪದಲ್ಲಿ ಅಖಿಲ್ ಕಾಣಿಸಿಕೊಂಡಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಆದರೆ, ಮೇಘಾ ಅವರು ಅಖಿಲ್ ಅವರೊಂದಿಗೆ ಬ್ರೇಕ್ಅಪ್ ಮಾಡಿಕೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತಮ್ಮ ಹೊಸ ಸಂಗಾತಿ ಅಥವಾ ಪ್ರೀತಿಯ ಜೀವನದ ಕುರಿತು ಮೇಘಾ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ವದಂತಿಗಳು ಹಾಗೇ ಹರಿದಾಡುತ್ತಿವೆ.
ಅಂದಹಾಗೆ, ಮೇಘಾ ಅವರು ಎಲ್‌ಎಲ್‌ಬಿ (LLB) ಪದವಿ ಪಡೆದಿದ್ದಾರೆ. ಆದರೆ, ಅವರು ವಕೀಲ ವೃತ್ತಿಯನ್ನು ಅಭ್ಯಾಸ ಮಾಡಿದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಅಖಿಲ್ ಮತ್ತು ಮೇಘಾ ದೀರ್ಘಕಾಲದ ಪ್ರೇಮ ಸಂಬಂಧದಲ್ಲಿದ್ದರು. ಇವರ ಪ್ರೇಮವು ಲಾ ಕಾಲೇಜಿನಲ್ಲಿ ಅಥವಾ ಅದಕ್ಕೂ ಮುಂಚೆಯೇ ಪ್ರಾರಂಭವಾಗಿರಬಹುದು. ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಇಬ್ಬರು ಮದುವೆಯಾಗಲು ನಿರ್ಧರಿಸಿದರು. ನಂತರ ಅಖಿಲ್ ಮತ್ತು ಮೇಘಾ 2024ರ ನವೆಂಬರ್ ತಿಂಗಳಲ್ಲಿ ಸಾಂಪ್ರದಾಯಿಕ ಸಮಾರಂಭದಲ್ಲಿ ವಿವಾಹವಾದರು.
ಅಖಿಲ್ ಮತ್ತು ಮೇಘಾ ದಂಪತಿಗೆ ಮಕ್ಕಳಿಲ್ಲ. ಮದುವೆಯ ನಂತರ ಅಖಿಲ್ ಅವರು ಮೇಘಾ ಅವರನ್ನು ವ್ಲಾಗಿಂಗ್ ಮಾಡಲು ಪ್ರೋತ್ಸಾಹಿಸಿದರು. ಇವರ ಲೈಫ್‌ಸ್ಟೈಲ್ ಮತ್ತು ಕಾಮಿಡಿ ವಿಡಿಯೋಗಳಲ್ಲಿ ಇವರಿಬ್ಬರನ್ನು ಜೊತೆಯಾಗಿ ನೋಡಲು ಅಭಿಮಾನಿಗಳು ತುಂಬಾ ಇಷ್ಟಪಡುತ್ತಿದ್ದರು. ಅಖಿಲ್ ಅವರ ಪ್ರೇಕ್ಷಕರೊಂದಿಗೆ ಪರಿಚಯವಾದ ನಂತರ, ಮೇಘಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮದೇ ಆದ ಪ್ರತ್ಯೇಕ ಪುಟವನ್ನು ಪ್ರಾರಂಭಿಸಿದರು. ಅವರು ಫ್ಯಾಷನ್ ಮತ್ತು ಬ್ಯೂಟಿಗೆ ಸಂಬಂಧಿಸಿದ ಕಂಟೆಂಟ್‌ಗಳನ್ನು ಪೋಸ್ಟ್ ಮಾಡುತ್ತಾರೆ.
ಮದುವೆಯ ನಂತರವೂ ಮೇಘಾ ಅವರು ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೊಂದಿದ್ದರು. ಅವರು ನಿರ್ದಿಷ್ಟ ಕೋರ್ಸ್ ಮಾಡಲು ಬಯಸಿದ್ದರು. ಆ ಬಯಕೆಯನ್ನು ಅರಿತ ಅಖಿಲ್, ಮೇಘಾರನ್ನು ಕೇಳದೆ ಆ ಕೋರ್ಸ್‌ಗೆ ಸೇರಿಸಿ ಸಪ್ರೈಸ್​ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಯ ಪ್ರಕಾರ, ಆ ಕೋರ್ಸ್‌ಗೆ ಹೋಗಲು ಮೇಘಾ ಅವರು ಬಸ್‌ನಲ್ಲಿ ಪ್ರಯಾಣಿಸಬೇಕಿತ್ತು. ಆ ಸಂದರ್ಭದಲ್ಲಿ ಬಸ್ ಕಂಡಕ್ಟರ್ ಪರಿಚಯವಾಗಿದ್ದು, ಕಾಲಕ್ರಮೇಣ ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆಯಿತು ಎನ್ನಲಾಗಿದೆ.
ಕೊನೆಗೆ ಮೇಘಾ ಸ್ಥಳೀಯ ಬಸ್ ಕಂಡಕ್ಟರ್ ಜತೆ ಓಡಿಹೋಗಿದ್ದಾರೆ. ಆ ಕಂಡಕ್ಟರ್​ಗೆ ಇತ್ತೀಚೆಗೆ ಸರ್ಕಾರಿ ಉದ್ಯೋಗ ದೊರೆತಿತ್ತು. ಮೇಘಾ ಅವರು ತಮ್ಮೊಂದಿಗೆ ಹಣ, ಆಭರಣಗಳು ಹಾಗೂ ಇತ್ಯಾದಿ ದುಬಾರಿ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಅದರಲ್ಲಿ ಮೇಘಾ ಅವರು ನೈಟ್‌ಗೌನ್ ಧರಿಸಿ ಓಡಿಹೋಗುತ್ತಿರುವುದು ಕಂಡುಬಂದಿದೆ.
ಮೇಘಾ ಓಡಿಹೋಗಿರುವ ಬಗ್ಗೆ ಅಖಿಲ್‌ಗೆ ಯಾವುದೇ ಸುಳಿವು ಇರಲಿಲ್ಲ ಮತ್ತು ಅವರು ನಾಪತ್ತೆಯಾಗಿದ್ದಾರೆ ಎಂದೇ ಅಖಿಲ್ ಭಾವಿಸಿದ್ದರು. ಈ ವಿಷಯ ಬೆಳಕಿಗೆ ಬರುವ ಮುಂಚೆಯೇ ಅಖಿಲ್ ನಾಪತ್ತೆ ದೂರು ದಾಖಲಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ ನಂತರ ಅವರಿಗೆ ಸತ್ಯಾಂಶ ತಿಳಿದುಬಂದಿದೆ. ವೈರಲ್ ಆಗಿರುವ ಆ ವಿಡಿಯೋದಲ್ಲಿ, ರಾತ್ರಿಯ ವೇಳೆ ಮೇಘಾ ಅವರು ಬಸ್ ಕಂಡಕ್ಟರ್ ಜೊತೆ ಓಡಿಹೋಗುತ್ತಿರುವುದು ಕಂಡುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವರು ನೈಟ್‌ಗೌನ್ ಧರಿಸಿ ಸೂಟ್‌ಕೇಸ್ ಹಿಡಿದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಅದರಲ್ಲಿ ಒಬ್ಬ ವ್ಯಕ್ತಿಯು ಮೇಘಾಳಿಗಾಗಿ ಕಾಯುತ್ತಿರುವುದು ಮತ್ತು ನಂತರ ಇಬ್ಬರೂ ಒಟ್ಟಿಗೆ ಓಡಿಹೋಗುತ್ತಿರುವುದು ಕಾಣಿಸಿಕೊಂಡಿದೆ. ಇದೀಗ ಮೇಘಾ ಅವರು ತಮ್ಮ ತಂದೆಯ ಮನೆಯಲ್ಲಿ ಕಾಣಸಿಕೊಂಡಿರುವುದು ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಂತಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net