ಸಮೋಸ, ಕಟ್ಲೇಟ್​ನ ಬಿಲ್​ ಪಾವತಿ ವಿಚಾರಕ್ಕೆ ಜಗಳ; ಹೋಟೆಲ್​ ಮಾಲೀಕನ ಬೆರಳನ್ನೇ ಕಚ್ಚಿದ ಭೂಪ ಅರೆಸ್ಟ್..Mumbai Man Bites Finger

Mumbai Man Bites Owner Finger(AI Image)
Mumbai Man Bites Owner Finger(AI Image)
Published on
ಮುಂಬೈ; ಆನ್​ಲೈನ್​ನಲ್ಲಿ ಹಣಪಾವತಿ ಮಾಡುವ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿದ್ದರಿಂದ, ಗ್ರಾಹಕನೊಬ್ಬ ಅಂಗಡಿ ಮಾಲೀಕನ ಕೈ ಕಚ್ಚಿ, ಗಂಭೀರ ಗಾಯ ಮಾಡಿದ ಘಟನೆ ಮಹಾರಾಷ್ಟ್ರದ ಆರ್ಥಿಕ ನಗರಿ ಮುಂಬೈನ ಮಲಾಡ್​ನಲ್ಲಿ ನಡೆದಿದೆ.
ಲಕ್ಷ್ಮೀಧರ್​ ಮಂಗಲ್ ಮಲ್ಲಿಕ್​ ಎಂಬಾತ ಹೋಟೆಲ್​ ಮಾಲೀಕ ರಂಜಿತ್​ ಹರಿವಾಂಶ್​ ಸಿಂಗ್​ರ ಮಧ್ಯದ ಬೆರಳು ಕಚ್ಚಿದ ಆರೋಪಿ ಎಂದು ಗುರುತಿಸಲಾಗಿದೆ. ಸದ್ಯ ಹೋಟೇಲ್​ ಮಾಲೀಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಏನಿದು ಘಟನೆ, ನಡೆದಿದ್ದೇನು?

ಶಿವಾಜಿ ಚೌಕ್‌ನಲ್ಲಿರುವ ರಂಜಿತ್​ ಹರಿವಾಂಶ್​ ಸಿಂಗ್​ರ ಹೋಟೆಲ್​ನಿಂದ ಲಕ್ಷ್ಮೀಧರ್​ ಮಂಗಲ್ ಮಲ್ಲಿಕ್​ ಶನಿವಾರ ರಾತ್ರಿ ಸಮೋಸ ಮತ್ತು ಕಟ್ಲೇಟ್​ ಖರೀದಿ ಮಾಡಿದ್ದನು. ಎಲ್ಲ ತಿಂದು ಮುಗಿಸಿದ ನಂತರ ಬಿಲ್​ ಇಷ್ಟಿದೆ ಎಂದು ಅಂಗಡಿ ಮಾಲೀಕನ ಮಗ ಹೇಳಿದರು. ಲಕ್ಷ್ಮೀಧರ್ ಆನ್​ಲೈನ್​ನಲ್ಲಿ ಹಣ ಪಾವತಿ ಮಾಡಲು ಮುಂದಾದಾಗ. ಇಲ್ಲಿ ಆನ್​ಲೈನ್​ ಪಾವತಿ ಮಾಡುವಂತಿಲ್ಲ. ನಗದು ಮಾತ್ರ ಎಂದು ಹೇಳಿದರು.
ಅಂಗಡಿ ಮಾಲೀಕನ ಮಗ ಆನ್​ಲೈನ್​ ಪಾವತಿಗೆ ಸುತರಾಂ ಒಪ್ಪದೇ ನಗದು ಬೇಕೆಂದು ಕೂಗಾಡಿದನು. ಎಷ್ಟೇ ಕೇಳಿಕೊಂಡರು ಜಗ್ಗದಿದ್ದನ್ನು ಕಂಡ ಮಲ್ಲಿಕ್​ ಸಿಟ್ಟಾದ. ಇಬ್ಬರ ಮಧ್ಯೆಯೂ ಮಾತಿನ ಚಕಮಕಿ ಜೋರಾಯಿತು. ಹೋಟೆಲ್​ ಮಾಲೀಕನ ಮೇಲಿನ ಸಿಟ್ಟನ್ನು ತೀತರಿಸಿಕೊಳ್ಳಲು ಸಿಬ್ಬಂದಿಯನ್ನು ಬೈಯತೊಡಗಿದ. ಜಗಳ ಶಾಂತಿಗೊಳಿಸುವ ನಿಟ್ಟಿನಲ್ಲಿ ರಂಜಿತ್​ ಹರಿವಾಂಶ್​ ಸಿಂಗ್​​ ಮಧ್ಯ ಪ್ರವೇಶಿಸಿ ಮಲ್ಲಿಕ್ ಜೊತೆ ಮಾತನಾಡಿ, ಶಾಂತರೂಪದಲ್ಲಿಯೇ ತಾಳ್ಮೆಯಿಂದ ಮಾತನಾಡಿದರು. ದಯವಿಟ್ಟು ಹೊರಹೋಗಿ ಎಂದು ಹೇಳಿದ್ದಾರೆ.

ಗ್ರಾಹಕ ವಶಕ್ಕೆ

ಇದರಿಂದ ಇನ್ನಷ್ಟು ಕುಪಿತಗೊಂಡ ಲಕ್ಷ್ಮೀಧರ್​ ಮಂಗಲ್ ಮಲ್ಲಿಕ್​ ಮುಂದೆಯಿದ್ದ ಸಿಂಗ್​ರ ಕೈ ಬೆರಳು ಕಚ್ಚಿದ. ನೋವು ತಾಳಲಾರದೆ ಸಿಂಗ್​ ಚೀರಾಡಿದಾಗ, ಮತ್ತಷ್ಟು ಬೆರಳು ಕಚ್ಚಲು ಶುರು ಮಾಡಿದ. ಈತನ ಹುಚ್ಚಾಟ ನಿಲ್ಲಿಸಲು ಹೋಟೆಲ್​​ನಲ್ಲಿದ್ದ ಸಿಬ್ಬಂದಿ ಮುಂದಾದರು. ಕೂಡಲೇ ರಂಜಿತ್​ ಹರಿವಾಂಶ್​ ಸಿಂಗ್​ರನ್ನು ಆಸ್ಪತ್ರೆಗೆ ಸೇರಿಸಿದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಬಂದ ಮುಂಬೈ ಪೊಲೀಸರು, ಹುಚ್ಚಾಟ ಮೆರೆದ ಮಲ್ಲಿಕ್​ನನ್ನು ವಶಕ್ಕೆ ಪಡೆದುಕೊಂಡರು. ಆತನ ವಿರುದ್ಧ ಹಲವು ಸಕ್ಷನ್​ಗಳ ಪ್ರಕರಣ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net