ಪುರುಷ ಭಕ್ತರಿಗೆ ಭಾರತದ ಈ ಪುಣ್ಯ ಕ್ಷೇತ್ರಗಳಿಗೆ ಪ್ರವೇಶ ಇಲ್ವಂತೆ, ಕಾರಣವೇನು ಗೊತ್ತೆ?..Temples Restrict

Temples Restrict For Men
Temples Restrict For Men
Published on

ಪ್ರಮುಖ ಮುಖ್ಯಾಂಶಗಳು

  • ಅಸ್ಸಾಂನಿಂದ ಕನ್ಯಾಕುಮಾರಿವರೆಗೂ ಯಾವ್ಯಾವ ದೇಗುಲಕ್ಕೆ ಪುರುಷರಿಗೆ ಪ್ರವೇಶವಿಲ್ಲ
  • ಶಬರಿ ಮಲೆಗೆ ಮಹಿಳೆಯರ ಪ್ರವೇಶ ನಿರ್ಬಂಧ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್
  • ಒಂಬತ್ತು ನ್ಯಾಯಾಧೀಶರಿಂದ ಧಾರ್ಮಿಕ ಹಕ್ಕುಗಳ ಗಂಭೀರ ಪರಿಶೀಲನೆ
ನವದೆಹಲಿ:  ಶಬರಿ ಮಲೆ ದೇಗುಲಕ್ಕೆ 10 ರಿಂದ 50 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಪ್ರವೇಶವಿಲ್ಲ ಎಂಬುದಕ್ಕೆ ಸಂಬಂಧಿಸಿ ವಿಚಾರಣೆಯಲ್ಲಿ  ಸುಪ್ರೀಂ ಕೋರ್ಟ್​ ಮುಂದೆ ಕೇಂದ್ರ ಸರ್ಕಾರವು ಒಂದು ಮಹತ್ವದ ವಾದವನ್ನು ಮಂಡಿಸಿದೆ. ಮಹಿಳೆಯರ ಪ್ರವೇಶ ನಿರ್ಬಂಧ ಕೇವಲ ತಾರತಮ್ಯವಲ್ಲ ಇದು ಆಯಾ ಕ್ಷೇತ್ರದ  ಜನರ ನಂಬಿಕೆ. ಮಹಿಳೆಯರಿಗಷ್ಟೇ ಅಲ್ಲ ದೇಶದ ಎಷ್ಟೋ ದೇಗುಲಗಲ್ಲಿ ಪುರಷರಿಗೂ ಪ್ರವೇಶವೇ ಇಲ್ಲ(Temples Restrict Entry Of Men) ಎಂದು ಸಣ್ಣ ಪಟ್ಟಿಯನ್ನು ಸರ್ಕಾರ  ಮುಂದಿಟ್ಟಿದೆ.
ಹಿಂದೂ ಧರ್ಮವು ಪುರಣಾಗಳ ಕಾಲದಿಂದಲೂ ಸ್ತ್ರೀ ತನಕ್ಕೆ ಮಹತ್ವದ ಸ್ಥಾನಮಾನವನನ್ನು ನೀಡುತ್ತಿದೆ.  ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಿಗೆ ಪೂಜ್ಯ ಸ್ಥಾನ ನೀಡಿದೆ. ಧಾರ್ಮಿಕ ಆಚರಣೆಗಳ ಬಗ್ಗೆ  ಹಸ್ತಕ್ಷೇಪ ಮಾಡುವ ಮುನ್ನ ಕೋರ್ಟ್​ ಆಯಾ ಧರ್ಮದ ಮೂಲ ನಂಬಿಕೆಗಳನ್ನು ಗಮನಿಸಬೇಕು. ಧಾರ್ಮಿಕ ನಂಬಿಕೆ ತರ್ಕಕ್ಕಿಂತ ಮಿಗಿಲು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೇಂದ್ರದ ಪರ ವಾದಿಸಿದರು.

ಅಸ್ಸಾಂನಿಂದ ಕನ್ಯಾಕುಮಾರಿಯವರೆಗೂ ಇರುವ ಪ್ರಸಿದ್ಧ ದೇಗುಲಗಳಲ್ಲಿ ಭಾರತದಲ್ಲಿರುವ ಯಾವ ದೇಗುಲದಲ್ಲಿ ಪುರುಷರಿಗೆ ಪ್ರವೇಶವಿಲ್ಲ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

  • ಒಂದು ಧಾರ್ಮಿಕ ಆಚರಣೆಯಲ್ಲಿ ಸಾಕಷ್ಟು ಮಹಿಳಾ ಭಕ್ತರನ್ನು ಸೇರಿಸಿದ್ದಕ್ಕಾಗಿ ಗಿನ್ನೆಸ್ ಬುಕ್​ ಆಫ್​​  ವಲ್ಡ್​ ರೆಕಾರ್ಟ್​ ಪಡೆದುಕೊಂಡ ಕೇರಳದ ಅಟ್ಟುಕಲ್​ ಭಗವತಿ ದೇಗುಲವು ಪೊಂಗಲ್​​ ಹಬ್ಬದ ಮುಖ್ಯದಿನದಂದು  ಮಹಿಳೆಯರಿಗೆ ಮಾತ್ರ ಪ್ರವೇಶ ನೀಡುತ್ತದೆ. ಪುರುಷರಿಗೆ ಆ ದಿನ ಮಾತ್ರ ನಿರ್ಬಂಧವಿರುತ್ತದೆ.
  • ಕೇರಳದ ಚಕ್ಕುಲತುಕಾವು ದೇವಸ್ಥಾನವು ಭಗವತಿ ದೇವಿಯನ್ನು ಪೂಜಿಸುತ್ತದೆ ಮತ್ತು ವಾರ್ಷಿಕ 'ನಾರಿ ಪೂಜೆ' ಎಂಬ ಆಚರಣೆಯನ್ನು ಆಚರಿಸುತ್ತದೆ. ಈ ಸಂದರ್ಭಧಲ್ಲಿ ಉಪವಾಸ ಮಾಡುವ ಮಹಿಳೆಯರ ಪಾದಪೂಜೆ ಇರುತ್ತದೆ. ಈದಿನವನ್ನು ಧನು ಎಂದು ಕರೆಯಲಾಗುತ್ತಿದೆ. ಆದರೆ, ನಾರಿ ಪೂಜಾ ದಿನ ಪುರುಷರಿಗೆ ಪ್ರವೇಶವಿಲ್ಲ
  •  ಪುಷ್ಕರ್​ನಲ್ಲಿ 14ನೇ ಶತಮಾನದಲ್ಲಿ ನಿರ್ಮಿಸಲಾದ ಬ್ರಹ್ಮ ದೇವಾಲಯವು ಹಿಂದೂ ಪುರಣಾದಲ್ಲಿ ಸೃಷ್ಟಿಕರ್ತ ಎಂದು ಎನಿಸಿಕೊಂಡಿರುವ ಬ್ರಹ್ಮನ ಗುಡಿ. ಈ ದೇಗುಲಕ್ಕೆ ವಿವಾಹಿತ ಪುರುಷರು ಭೇಟಿ ಕೊಟ್ಟರೆ , ಮದುವೆಯಾದ ನಂತರ ದಾಂಪತ್ಯದಲ್ಲಿ ಸಮಸ್ಯೆ ಎದುರಿಸುತ್ತಾರೆ ಎನ್ನುವ ಪ್ರತೀತಿ ಇದೆ. ಹೀಗಾಗಿ, ಸಾಮಾನ್ಯವಾಗಿ ಪುರುಷರು ಗರ್ಭಗುಡಿಯನ್ನು ಪ್ರವೇಶಿಸುವುದಿಲ್ಲ.
  • ಕನ್ಯಾಕುಮಾರಿಯಲ್ಲಿರುವ ಭಗವತಿ ಅಮ್ಮನ್ ಅಥವಾ ಕುಮಾರಿ ಅಮ್ಮನ್ ದೇವಾಲಯವು ದೇವಿ ಕನ್ಯಾ ಕುಮಾರಿಯನ್ನು ಪೂಜಿಸಲಾಗುತ್ತದೆ. ಪಾರ್ವತಿಯ ಅವತಾರ ಎಂದು ನಂಬಲಾಗಿದೆ. ಇವರು ಶಿವನನನ್ನು ಪತಿಯನ್ನಾಗಿಸಿಕೊಳ್ಳಲು ಭಗವತಿ ಅಮ್ಮನ್ ಅವರು ಧ್ಯಾನಕ್ಕಾಗಿ ಸಮುದ್ರದ ಪ್ರತ್ಯೇಕ ಪ್ರದೇಶಕ್ಕೆ ತೆರಳಿರುತ್ತಾರೆ.  ವಿವಾಹದ ಸಮಯ ತಪ್ಪಿ ಹೋದ ಕಾರಣ ಅವರು ಸನ್ಯಾಸ ದೇವಿಯಾದರು. ಪರಶುರಾಮನಿಂದ ನಿರ್ಮಾಣವಾದ ಈ ದೇಗುಲಕ್ಕೆ ಬ್ರಹ್ಮಚಾರಿ, ವಿವಾಹಿತ ಪುರುಷರಿಗೆ ಪ್ರವೇಶವಿಲ್ಲ.
  • ಬಿಹಾರದ ಮಜಫರ್​​ನಲ್ಲಿರುವ ಶೀತಲ ಮಾತಾ ದೇಗುಲಕ್ಕೆ ನಿರ್ದಿಷ್ಟ ಅವಧಿಯಲ್ಲಿ ಅರ್ಚಕರಿಗೆ ಮತ್ತು ಪುರಷರಿಗೆ ಪ್ರವೇಶವಿಲ್ಲ ಮಹಿಳೆಯರು ಮಾತ್ರ ಭೇಟಿ ನೀಡಬಹುದು.
  • ಕೇರಳದ ಕೊಟ್ಟಂಕುಳಂಗರ ಶ್ರೀ ದೇವಿ ದೇವಾಲಯವು ಚಮಯವಿಳಕ್ಕು ಎಂಬ ವಿಶಿಷ್ಟ ಸಂಪ್ರದಾಯವನ್ನು ಹೊಂದಿದೆ. ಪುರುಷರು ದೇವಿಯ ಸನ್ನಿಧಿ ಪಡೆದುಕೊಳ್ಳಬೇಕು ಎಂದರೆ, ಮಹಿಳೆಯರ ಒಳ ಉಡುಪು ಧರಿಸಿ ಆಶೀರ್ವಾದ ಪಡೆದುಕೊಳ್ಳಬೇಕು. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರು ಹುಡುಗಿಯರಂತೆ ಬಟ್ಟೆ ಧರಿಸಬೇಕು ಎನ್ನುವ ಪದ್ಧತಿ ಇದೆ. 
  • ಅಸ್ಸಾಂನ ಕಾಮರೂಪ ಕಾಮಾಕ್ಯ ದೇವಸ್ಥಾನವು ಅಂಬುಬಾಚಿಯ ಸಮಯದಲ್ಲಿ ಪುರುಷರು ಭೇಟಿ ನೀಡುವಂತಿಲ್ಲ. ಈ ಸಮಯದಲ್ಲಿ ವಾರ್ಷಿಕವಾಗಿ ದೇವತೆ ಋತುಮತಿಯಾಗುವ ಹಿನ್ನೆಲೆ, ಈ ಸಂದರ್ಭದಲ್ಲಿ ಪುರುಷರಿಗೆ ಪ್ರವೇಶವಿಲ್ಲ ಎನ್ನುವ ನಂಬಿಕೆ ಇಲ್ಲಿನ ಜನರಿಗೆ ಇದೆ, (ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net