ಟಿಸಿಎಸ್ ಮತಾಂತರ ಕೇಸ್‌ಗೆ ಅಶೋಕ್ ಖರತ್ ಕನೆಕ್ಷನ್? ದೇವಮಾನವನ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು ನನ್ನ ಮಗಳ ಬಲಿ; ನಿದಾ ತಂದೆ ಕಣ್ಣೀರು! TCS Nida Khan

ದೇವಮಾನವ ಅಶೋಕ್​ ಖರತ್​ ಪ್ರಕರಣದಿಂದ ಜನರ ಗಮನ ಬೇರೆ ಕಡೆ ಮಾಡಲು ಈ ಸಂಚು
ದೇವಮಾನವ ಅಶೋಕ್​ ಖರತ್​ ಪ್ರಕರಣದಿಂದ ಜನರ ಗಮನ ಬೇರೆ ಕಡೆ ಮಾಡಲು ಈ ಸಂಚು
Published on

ಪ್ರಮುಖ ಮುಖ್ಯಾಂಶಗಳು

  • ನನ್ನ ಮಗಳ ಮೇಲೆ ಪಿತೂರಿ ಮಾಡಲಾಗುತ್ತಿದೆ
  • ದೇವಮಾನವ ಅಶೋಕ್​ ಖರತ್​ ಪ್ರಕರಣದಿಂದ ಜನರ ಗಮನ ಬೇರೆ ಕಡೆ ಮಾಡಲು ಈ ಸಂಚು
  • ನನ್ನ ಮಗಳು ಅವಳ ಅತ್ತೆ ಮನೆಯಲ್ಲಿದ್ದಾಳೆ : ನಿದಾ ಖಾನ್​ ತಂದೆ
ನಾಸಿಕ್: ದೇಶದ ಪ್ರತಿಷ್ಠಿತ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಾಸಿಕ್ ಘಟಕದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರ ಪ್ರಕರಣ ಈಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಹಗರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ನಿದಾ ಖಾನ್ ಅವರ ಕುಟುಂಬ ಈಗ ಮೌನ ಮುರಿದಿದ್ದು, ಪೊಲೀಸರ ಮತ್ತು ದೂರುದಾರರ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ.

ನನ್ನ ಮಗಳ ವಿರುದ್ಧ ಪಿತೂರಿ ಮಾಡಲಾಗುತ್ತಿದೆ

ಟಿಸಿಎಸ್ ಬಿಪಿಒ ಘಟಕದ ಮಾನವ ಸಂಪನ್ಮೂಲ (HR) ಮುಖ್ಯಸ್ಥೆ ಎಂದು ಗುರುತಿಸಲಾದ ನಿದಾ ಖಾನ್ ಅವರ ತಂದೆ, ತಮ್ಮ ಮಗಳನ್ನು ಈ ಪ್ರಕರಣದಲ್ಲಿ ವಿನಾಕಾರಣ ಸಿಲುಕಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮಗಳ ವಿರುದ್ಧದ ಯಾವುದೇ ಆರೋಪಗಳು ನಿಜವಲ್ಲ. ಇದೊಂದು ದೊಡ್ಡ ಪಿತೂರಿ ಎಂದು ಅವರು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಇತ್ತೀಚೆಗೆ ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಾಸಿಕ್‌ನ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಪ್ರಕರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಈ ಹೊಸ ನಾಟಕವಾಡಲಾಗುತ್ತಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಗರ್ಭಿಣಿ ಮಗಳ ಬಗ್ಗೆ ಕುಟುಂಬದ ಆತಂಕ

ನಿದಾ ಖಾನ್ ಅವರ ತಾಯಿ ಮತ್ತು ಚಿಕ್ಕಪ್ಪ ಕೂಡ ಆರೋಪಗಳನ್ನು ನಿರಾಕರಿಸಿದ್ದಾರೆ. ಅವರ ಪ್ರಕಾರ, ನಿದಾ ಸದ್ಯ ಭಿವಂಡಿಯಲ್ಲಿರುವ ತಮ್ಮ ಅತ್ತೆಯ ಮನೆಯಲ್ಲಿದ್ದು, ಆಕೆ ಗರ್ಭಿಣಿಯಾಗಿದ್ದಾರೆ. ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ. ಯಾರನ್ನೂ ಮತಾಂತರ ಮಾಡಲು ನಾವು ಒತ್ತಾಯಿಸಿಲ್ಲ. ಈ ಸುಳ್ಳು ಆರೋಪಗಳಿಂದ ನಮಗೆ ತುಂಬಾ ನೋವಾಗಿದೆ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಇತ್ತ ಪೊಲೀಸರು ನಿದಾ ಖಾನ್ ಅವರ ಪತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ನನ್ನ ಪತ್ನಿಯ ಇಂತಹ ಚಟುವಟಿಕೆಗಳ ಬಗ್ಗೆ ನನಗೆ ಏನೂ ತಿಳಿದಿಲ್ಲ, ಎಂದು ಪತಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ನಿರೀಕ್ಷಣಾ ಜಾಮೀನಿಗೆ ನಿದಾ ಅರ್ಜಿ

ಲೈಂಗಿಕ ದೌರ್ಜನ್ಯ ನಡೆಸಿ ಬಲವಂತದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಧಾ ಖಾನ್​ ಮೇಲೆ ದೂರು ದಾಖಲಾಗುತ್ತಿದಂತೆ, ನಿಧಾ ನಾಸಿಕ್​ನ ನ್ಯಾಯಾಲಯದಲ್ಲಿ, ತಾನು ಗರ್ಭಿಣಿಯಾಗಿದ್ದು, ನನ್ನ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರೀಕ್ಷಣಾ ಜಾಮೀನನ್ನು ನೀಡ ಬೇಕಾಗಿ ಕೋರಿದ್ದಾರೆ.

ಪ್ರಕರಣದ ಹಿನ್ನಲೆ

ಮಹಾರಾಷ್ಟ್ರದ ನಾಸಿಕ್​ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಕಚೇರಿಯಲ್ಲಿ 2022ರ ಫೆಬ್ರವರಿಯಿಂದ 2026ರ ಮಾರ್ಚ್‌ವರೆಗೆ ನಡೆದ ಕಿರುಕುಳ ಬಗ್ಗೆ ಅಲ್ಲಿನ ಉದ್ಯೋಗಿಗಳು ಆರೋಪಿಸಿದ್ದಾರೆ. ತಮ್ಮ ಸೀನಿಯರ್ ಸಹೋದ್ಯೋಗಿಗಳು ಮತ್ತು ಎಚ್‌ಆರ್ ಮ್ಯಾನೇಜರ್‌ಗಳಿಂದ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ, ಬ್ಲ್ಯಾಕ್‌ಮೇಲ್, ಧಾರ್ಮಿಕ ಮತಾಂತರಕ್ಕೆ ಒತ್ತಾಯ ಮತ್ತು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಂಟು ಮಹಿಳಾ ಉದ್ಯೋಗಿಗಳು ಆರೋಪ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಏಳು ಆರೋಪಿಗಳನ್ನು ಬಂಧಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net