ಎಎನ್ಐ ಜೊತೆ ಮಾತನಾಡಿದ ಮಲಿವಾಲ್, ತಮ್ಮ ನಿರ್ಧಾರದ ಹಿಂದಿನ ಕಹಿ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. 2006 ರಿಂದ ಅರವಿಂದ್ ಕೇಜ್ರಿವಾಲ್ರೊಂದಿಗೆ ಪ್ರತಿ ಆಂದೋಲನದಲ್ಲೂ ಸಕ್ರಿಯವಾಗಿ ಕೆಲಸ ಮಾಡುತ್ತ ಬಂದಿರುವುದಾಗಿ ತಿಳಿಸಿರುವ ಅವರು, ಇಷ್ಟಾಗಿಯೂ ತಮ್ಮ ಸ್ವಂತ ಮನೆಯಲ್ಲೇ (ಕೇಜ್ರಿವಾಲ್ ನಿವಾಸ) ಒಬ್ಬ ಗೂಂಡಾ ತಮ್ಮನ್ನು ಥಳಿಸಿದ್ದಾನೆ, ಅದರ ವಿರುದ್ಧ ಧ್ವನಿ ಎತ್ತಿದಾಗ ಬೆದರಿಕೆ ಹಾಕಲಾಯಿತು. ಅಷ್ಟೇ ಅಲ್ಲದೆ, ಈ ಘಟನೆಯ ಬಗ್ಗೆ ನಾನು ದಾಖಲಿಸಿದ ಎಫ್‌ಐಆರ್ ಹಿಂಪಡೆಯಲು ತುಂಬಾ ಒತ್ತಡ ಹೇರಲಾಯಿತು ಎಂದು ಅಳಲು ತೋಡಿಕೊಂಡಿದ್ದಾರೆ.