ಪತ್ನಿ ಜೊತೆಗೆ ಗಲಾಟೆ: ಇಬ್ಬರು ಅಪ್ರಾಪ್ತ ಮಕ್ಕಳನ್ನು ಕೊಂದು ತಾನೂ ನದಿಗೆ ಹಾರಿ ಆತ್ಮಹತ್ಯೆ ಮಾಡ್ಕೊಂಡ ಪತಿ | Suicide

ಮೃತಪಟ್ಟ ತಂದೆ ಮತ್ತು ಮಕ್ಕಳು
ಮೃತಪಟ್ಟ ತಂದೆ ಮತ್ತು ಮಕ್ಕಳು
Published on
ಹೈದರಾಬಾದ್: ಪತ್ನಿಯೊಂದಿಗಿನ ಜಗಳದ ಬಳಿಕ ಪತಿಯೊಬ್ಬ ತನ್ನ ಇಬ್ಬರು ಅಪ್ರಾಪ್ತ ಮಕ್ಕಳು ಕೊಂದು ಬಳಿಕ ತಾನೂ ನದಿಗೆ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ತೆಲಂಗಾಣದ ನಿಜಾಮ್ ಸಾಗರ್​ ನದಿ ಬಳಿ ನಡೆದಿದೆ ಎಂದು ಶುಕ್ರವಾರ(ಜೂ. 12) ವರದಿಯಾಗಿದೆ.
ಮೃತರನ್ನು ನಿಜಾಮ್‌ಪೇಟೆ ಮಂಡಲದ ಬೋಯಿ ಕೃಷ್ಣ(34), ಮಕ್ಕಳಾದ ರಕ್ಷಿತ್(8) ಮತ್ತು ಅನನ್ಯ(5) ಎಂದು ಗುರುತಿಸಲಾಗಿದೆ. ಬೋಯಿ ಕೃಷ್ಣ ತನ್ನ ಪತ್ನಿಯೊಂದಿಗೆ ಗಲಾಟೆ ಬಳಿಕ ಗುರುವಾರ ಬೆಳಿಗ್ಗೆ ತನ್ನ ಇಬ್ಬರು ಮಕ್ಕಳನ್ನು ನಿಜಾಮ್ ಸಾಗರ್‌ಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ.
ನದಿಯ ತೀರದಲ್ಲಿ ಮಕ್ಕಳೊಂದಿಗೆ ಊಟ ಮಾಡಿದ ಬಳಿಕ ಆಟವಾಡಿ ಕೆಲವು ಸೆಲ್ಫಿಗಳನ್ನು ತೆಗೆದುಕೊಂಡು ಅವುಗಳನ್ನು ತಮ್ಮ ಸಂಬಂಧಿಕರಿಗೆ ಕಳುಹಿಸಿದ್ದಾನೆ. ಬಳಿಕ ಮಕ್ಕಳನ್ನು ನದಿಗೆ ಎಸೆದು, ಕುಟುಂಬ ಸದಸ್ಯರಿಗೆ ವಿಡಿಯೋ ಕರೆ ಮಾಡಿ ಮಕ್ಕಳನ್ನು ಕೊಂದಿದ್ದೇನೆ, ನಾನೂ ಸಾಯುತ್ತಿದ್ದೇನೆ ಎಂದು ಸ್ಥಳದ ಹೆಸರು ಹೇಳಿ ಆತ್ಮಹತ್ಯೆ ಮಾಡಕೊಂಡಿದ್ದಾನೆ ಎನ್ನಲಾಗಿದೆ.
ಕುಟುಂಬ ಸದಸ್ಯರು ಸ್ಥಳಕ್ಕೆ ಧಾವಿಸಿ ಹುಡುಕಿದಾಗ, ಬೈಕ್, ಚಪ್ಪಲಿ ಮತ್ತು ಮೊಬೈಲ್ ಫೋನ್ ಸ್ಥಳದಲ್ಲಿ ಕಂಡುಬಂದಿವೆ. ಒಂದೆರಡು ಗಂಟೆಗಳ ಕಾಲ ಅವರನ್ನು ಹುಡುಕಿದ ಬಳಿಕ ಪೊಲೀಸರಿಗೆ ಕರೆ ಮಾಡಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಮೂವರ ಶವಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಕಾಮರೆಡ್ಡಿ ಜಿಲ್ಲೆಯ ಬನ್ಸ್ವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net