ಯುಜಿಸಿ ನೋಟಿಫಿಕೇಶನ್ ಬಗ್ಗೆ ಖಡಕ್ ಮಾತುಗಳನ್ನಾಡಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ದೇಶದಲ್ಲಿ ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರ ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ, ಸಮಾನತೆಯ ಸಮಾಜ ನಿರ್ಮಾಣ ಮಾಡಲು ನಡೆದಂತಹ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಸಮಾಜವು ಮತ್ತೆ ಹಳೆಯ ಕೆಟ್ಟ ಆಚರಣೆಗಳ ಕಡೆಗೆ ಮರಳುತ್ತಿದೆಯೇ? ಎಂದು ಬೇಸರ ಹೊರಹಾಕಿದರು. ಅಲ್ಲದೆ, ಭಾರತದ ಏಕತೆ, ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಫಲಿಸಬೇಕು ಎಂದರು. ಯುಜಿಸಿ ನಿಯಮಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದ ನ್ಯಾಯಾಲಯ, ಕೇಂದ್ರ ಮತ್ತು ಯುಜಿಸಿಗೆ ನೋಟಿಸ್ ನೀಡಿತು.