ಪ್ರಿಸಿಷನ್​ & ಗೈಡೆಡ್​ ಆರ್ಟಿಲರಿ ಪೂರೈಕೆ ಮಾಡಲೂ ಅನುಮೋದನೆ

ಪ್ರಿಸಿಷನ್​ & ಗೈಡೆಡ್​ ಆರ್ಟಿಲರಿ
ಪ್ರಿಸಿಷನ್​ & ಗೈಡೆಡ್​ ಆರ್ಟಿಲರಿ
Published on
ವಾಷಿಂಗ್ಟನ್​: ಭಾರತಕ್ಕೆ ಜಾವೆಲಿನ್​ (ಎಫ್​ಜಿಎಂ & 148) ಆ್ಯಂಟಿ & ಟ್ಯಾಂಕ್​ ಗೈಡೆಡ್​ ಮಿಸೈಲ್​ ಮಾರಾಟ ಮಾಡಲು ಅಮೆರಿಕ ಸರ್ಕಾರ ಅನುಮೋದನೆ ನೀಡಿದೆ. ಈ ಒಪ್ಪಂದದ ಮೌಲ್ಯ 45.7 ಮಿಲಿಯನ್​ ಡಾಲರ್​ (ಸುಮಾರು 385 ಕೋಟಿ ರೂ.) ಆಗಲಿದೆ. ಇದರ ಜತೆ ಎಕ್ಸ್​ ಕ್ಯಾಲಿಬರ್​ (ಎಂ 982ಎ1) ಪ್ರಿಸಿಷನ್​& ಗೈಡೆಡ್​ ಆರ್ಟಿಲರಿ ಮಾರಾಟಕ್ಕೂ ಅನುಮೋದನೆ ಸಿಕ್ಕಿದೆ. ಎರಡೂ ವಹಿವಾಟಿನ ಒಟ್ಟು ಮೊತ್ತ 93 ಮಿಲಿಯನ್​ ಡಾಲರ್​ (824 ಕೋಟಿ ರೂ.) ಆಗಲಿದೆ.
ಈ ಒಪ್ಪಂದ ಭಾರತದ ರಣಾ ಶಕ್ತಿ ಬಲಗೊಳಿಸುತ್ತದೆ. ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಇದು ಸಹಾಯ ಮಾಡಲಿದೆ. ಇದು ಅಮೆರಿಕ&ಭಾರತ ರಕ್ಷಣಾ ಸಹಕಾರಕ್ಕೆ ಮಹತ್ವದ ಹೆಜ್ಜೆ ಆಗಲಿದೆ.

ಅಮೆರಿಕ ವಿದೇಶಾಂಗ ಇಲಾಖೆ

ಏನೇನು ಖರೀದಿ?
100 ಜಾವೆಲಿನ್​ ಪಣಿ, 25 ಲಾಂಚರ್​ ಯೂನಿಟ್​ಗಳು, ತರಬೇತಿ ಸಾಧನಗಳು, ಉಪಕರಣದ ಬಿಡಿ ಭಾಗಗಳು, ತಾಂತ್ರಿಕ ಸಹಾಯ

ಭಾರತಕ್ಕೆ ಲಾಭ ಏನು?

  • ಚೀನಾ&ಪಾಕಿಸ್ತಾನದ ಗಡಿಯಲ್ಲಿ ಟ್ಯಾಂಕ್​ಗಳ ವಿರುದ್ಧ ಭಾರತೀಯ ಸೈನಿಕರು ಸುಲಭವಾಗಿ ಕಾರ್ಯಾಚರಣೆ ನಡೆಸಬಹುದು
  • ಈಗಾಗಲೇ ಭಾರತದಲ್ಲಿ ಜಾವೆಲಿನ್​ ಪಣಿ ಇದೆ. ಆದರೆ ಇದು ಅತ್ಯಾಧುನಿಕ ಮತ್ತು ಶಕ್ತಿಯುತ
  • ಸೇನೆಯ ಬತ್ತಳಿಕೆಗೆ ಹೊಸ ಅಸ್ತ್ರ

ಜಾವೆಲಿನ್​ ಪಣಿ ಹೇಗಿದೆ?

  1. ಇದು ಒಬ್ಬ ಸೈನಿಕ ಭುಜದ ಮೇಲೆ ಇಟ್ಟುಕೊಂಡು ಹಾರಿಸಬಹುದಾದ ಪಣಿ.
  2. ಟ್ಯಾಂಕ್​, ಬಂಕರ್​, ಕಟ್ಟಡಗಳ ಮೇಲೆ ದಾಳಿ ಮಾಡಬಲ್ಲದು.
  3. ಫೈರ್​ ಆ್ಯಂಡ್​ ರ್ಗೆಟ್​ ಮಾದರಿಯಲ್ಲಿ ಇದು ಕೆಲಸ ಮಾಡುತ್ತದೆ.
  4. ಒಮ್ಮೆ ಟಾರ್ಗೆಟ್​ ಲಾಕ್​ ಮಾಡಿ ಉಡಾವಣೆ ಮಾಡಿದರೆ ನಿಖರವಾಗಿ ಗುರಿಯನ್ನು ತಲುಪುತ್ತದೆ.
  5. ಟ್ಯಾಂಕ್​ನ ಮೇಲ್ಭಾಗದ ದುರ್ಬಲ ಜಾಗದ ಮೇಲೆ ನಿಖರ ವಾಗಿ ದಾಳಿ ಮಾಡುವ ಶಕ್ತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net