

ನವದೆಹಲಿ: ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಆಪಲ್ ಕಂಪನಿ ಶೇ. 28ರಷ್ಟು ಮೌಲ್ಯದ ಪಾಲನ್ನು ಹೊಂದುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
ಕೌಂಟರ್ಪಾಯಿಂಟ್ ರಿಸರ್ಚ್ ವರದಿಯ ಪ್ರಕಾರ, ಭಾರತೀಯರು ಬಜೆಟ್ ಫೋನ್ಗಳಿ ಗಿಂತ 30,000 ರೂ.ಗೂ ಅಧಿಕ ಬೆಲೆಯ ‘ಪ್ರೀಮಿಯಂ’ ಫೋನ್ಗಳನ್ನು ಖರೀದಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇಎಂಐ ಸೌಲಭ್ಯಗಳು ಈ ಬೆಳವಣಿಗೆಗೆ ದೊಡ್ಡ ಬಲ ನೀಡಿವೆ.
ಐಫೋನ್ 16 ಸರಣಿ 2025ರಲ್ಲಿ ಅತಿ ಹೆಚ್ಚು ರಫ್ತುಗೊಂಡ ಮಾದರಿಯಾಗಿ ಹೊರಹೊಮ್ಮಿದೆ. ಮಾರುಕಟ್ಟೆಯ ಒಟ್ಟು ಮೌಲ್ಯ ಶೇ. 8ರಷ್ಟು ವೃದ್ಧಿಯಾಗಿದ್ದು, ಸ್ಯಾಮ್ಂಗ್ ಫೋಲ್ಡೆಬಲ್ ಫೋನ್ ವಿಭಾಗದಲ್ಲಿ ಮುನ್ನಡೆ ಸಾಧಿಸಿದೆ. ಸ್ಮಾರ್ಟ್ಫೋನ್ ವಲಯದ ಈ ‘ಪ್ರೀಮಿಯಂ’ ಟ್ರೆಂಡ್ 2026ರಲ್ಲೂ ಮುಂದುವರಿಯುವ ಸೂಚನೆಗಳಿವೆ.