ಚಿತ್ರೀಕರಣದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಧರ್ಮೇಂದ್ರ ಎಂಬ ಸೆಕ್ಯೂರಿಟಿ ಗಾರ್ಡ್, ಅನುಪಮ್ ಖೇರ್ ಅವರ ದೊಡ್ಡ ಅಭಿಮಾನಿ. ಅವರು ನಟನ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದರು. ಆದರೆ ಅವರ ಬಳಿ ಇದ್ದದ್ದು ಹಳೆಯ ಮಾದರಿಯ 'ಕೀಪ್ಯಾಡ್' ಫೋನ್ ಮಾತ್ರ. ಅದರಲ್ಲಿ ಕ್ಯಾಮೆರಾ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ.ಸೆಲ್ಫಿ ತೆಗೆದುಕೊಳ್ಳಲು ಸಾಧ್ಯವಾಗದೆ ನಿರಾಸೆಗೊಂಡ ಧರ್ಮೇಂದ್ರ ಅವರನ್ನು ಕಂಡ ಅನುಪಮ್ ಖೇರ್, ನೋಡಿ ನನಗೇ ಬೇಸರವಾಯಿತು (Mujhe Bura Laga Dekh Ke) ಎಂದು ಹೇಳುತ್ತಾ ಅವರಿಗೆ ಹೊಸ ಸ್ಮಾರ್ಟ್‌ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.