ನೋಯ್ಡಾದಲ್ಲಿ ಹಂತಕ ಗುಂಡಿಗೆ ಮತ್ತೊಂದು ಬಲಿ! ಕೊಳದಲ್ಲಿ ಬಿದ್ದು ಒದ್ದಾಡಿ ಸತ್ತ ಮೂರು ವರ್ಷದ ಕಂದಮ್ಮ | Pond
ಕೊಳದಲ್ಲಿ ಬಿದ್ದು ಸಾವನ್ನಪ್ಪಿದ ಮೂರು ವರ್ಷದ ಬಾಲಕ ದೇವಾಂಶ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನೋಯ್ಡಾ ಟೆಕ್ಕಿ ಸಾವನ್ನಪ್ಪಿ ಸುಮಾರು ಒಂದು ತಿಂಗಳ ನಂತರ ಇನ್ನೊಂದು ಸಾವು
ಕೊಳದಲ್ಲಿ ಬಿದ್ದು ಸಾವನ್ನಪ್ಪಿದ ಮೂರು ವರ್ಷದ ಬಾಲಕ ದೇವಾಂಶ್
ಊರ ದೇಚಸ್ಥಾನದ ಕಾರ್ಯಕ್ರಮಕ್ಕೆ ಬಂದಿದ್ದ ದೇವಾಂಶ್
ನೋಯ್ಡಾ: ಗ್ರೇಟರ್ ನೋಯ್ಡಾದಲ್ಲಿ ನೀರು ತುಂಬಿದ ಗುಂಡಿಯಲ್ಲಿ ನೋಯ್ಡಾ ಟೆಕ್ಕಿ ಸಾವನ್ನಪ್ಪಿ ಸುಮಾರು ಒಂದು ತಿಂಗಳ ನಂತರ, ಶನಿವಾರ (ಫೆ.14)ಗ್ರೇಟರ್ ನೋಯ್ಡಾದ ದಲೇಲ್‌ಗಢ ಗ್ರಾಮದಲ್ಲಿ ನೀರು ತುಂಬಿದ ಗುಂಡಿ (Pond) ಗೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮೃತ ಮಗುವನ್ನು ಅನಿಲ್ ಮತ್ತು ಅಂಜಲಿ ಅವರ ಪುತ್ರ ದೇವಾಂಶ್ ಎಂದು ಗುರುತಿಸಲಾಗಿದ್ದು, ಇವರು ನೋಯ್ಡಾ ಸಮೀಪದ ತಮ್ಮ ಹಳ್ಳಿಗೆ ದೇವಸ್ಥಾನದ ಕಾರ್ಯಕ್ರಮಕ್ಕೆಂದು ಬಂದಿದ್ದರು ಎಂದು ಹೇಳಲಾಗುತ್ತಿದೆ. ದೇವಸ್ಥಾನದಲ್ಲಿ ಮಗು ಕಾಣೆಯಾದಾಗ ಪೋಷಕರು ಮತ್ತು ಸಾರ್ವಜನಿಕರು ಮಗುವನ್ನು ಹುಡುಕಲು ಪ್ರಾರಂಭಿಸಿದ್ದಾರೆ.
ಮಗು ಕೊಳದ ಬಳಿ ಹೋಗಿರಬಹುದು ಎಂದು ಕೆಲವರು ಶಂಕಿಸಿದ್ದು, ಕೊಳದ ಬಳಿ ಹೋದಾಗ ಮಗುವಿನ ಹೆಣ ಪತ್ತೆಯಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಪೊಲೀಸರು ಬಂದ ನಂತರ ಹೆಣವನ್ನು ಹೊರತೆಯಲಾಗಿದೆ. ಮಗು ಆಟವಾಡುತ್ತಾ ಕೊಳದಲ್ಲಿ ಬಿದ್ದು ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಈ ಘಟನಯಿಂದ ಕುಪಿತರಾದ ಸಾರ್ವಜನಿಕರು, ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಗುವಿನ ಸಾವು ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ದಶಕಗಳಿಂದ ಕೊಳವನ್ನು ಅಧಿಕಾರಿಗಳು ಸ್ವಚ್ಛಗೊಳಿಸಿಲ್ಲ ಮತ್ತು ಕೊಳದ ಸುತ್ತ ಯಾವುದೇ ತಡೆಗೋಡೆಗಳನ್ನು ನಿರ್ಮಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಆದರೆ ಈ ಆರೋಪಗಳನ್ನು ತಳ್ಳಿಹಾಕಿರುವ ಗ್ರೇಟರ್ ನೋಯ್ಡಾ ಪ್ರಾಧಿಕಾರ, ಮಗು ಸತ್ತಿರುವ ಕೊಳ ಇರುವುದು ಸರ್ಕಾರದ ಭೂಮಿಯಲ್ಲಲ್ಲ, ಬದಲಾಗಿ ಅದು ಅದೇ ಊರಿನ ರೈತನೊಬ್ಬನ ಖಾಸಗಿ ಕೊಳವಾಗಿದ್ದು, ಈ ಸಾವಿಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆ ಇದೇ ಮೊದಲಲ್ಲ
ಫೆಬ್ರವರಿ 6 ರಂದು ಪಶ್ಚಿಮ ದೆಹಲಿಯ ಜನಕಪುರಿಯಲ್ಲಿ ಇದೇ ರಿತೀಯ ಘಟನೆ ನಡೆದಿದ್ದು, ದೆಹಲಿ ಜಲ ಮಂಡಳಿ ಯೋಜನೆಗಾಗಿದಿದ್ದ ಗುಂಡಿಗೆ ಬಿದ್ದು ಖಾಸಗಿ ಬ್ಯಾಂಕಿನ ಉದ್ಯೋಗಿಯೊಬ್ಬರು ಸಾವನ್ನಪ್ಪಿದರು. ಮರುದಿನ ಬೆಳಿಗ್ಗೆ ನಾಲ್ಕು ಗುಂಡಿಯಿಂದ ಕಮಲ್ ಧ್ಯಾನಿ (25) ಅವರ ದೇಹ ಮತ್ತು ಅವರ ಬೈಕ್ ಅನ್ನು ಹೊರತೆಗೆಯಲಾಗಿತ್ತು.
ಜನವರಿ 16 ಮತ್ತು 17 ರ ಮಧ್ಯರಾತ್ರಿ ನೋಯ್ಡಾದ ಸೆಕ್ಟರ್ 150 ರಲ್ಲಿ ನಿರ್ಮಾಣ ಸ್ಥಳದ ಬಳಿ ನೀರು ತುಂಬಿದ ಹೊಂಡಕ್ಕೆ ಕಾರು ಬಿದ್ದು ಮುಳುಗಿ ಸಾಫ್ಟ್‌ವೇರ್ ಎಂಜಿನಿಯರ್ ಯುವರಾಜ್ ಮೆಹ್ತಾ (27) ಸಾವನ್ನಪ್ಪಿದ ವಾರಗಳ ನಂತರ ಈ ಘಟನೆ ನಡೆದಿದೆ. ಕಠಿಣ ಚಳಿ ಮತ್ತು ಚಳಿಗಾಲದ ಮಂಜಿನಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಸಹಾಯಕ್ಕಾಗಿ ಕಾಯುತ್ತಿದ್ದಾಗ ಮೆಹ್ತಾ ಸಾವನ್ನಪ್ಪಿದರು,(ಏಜನ್ಸೀಸ್).