ಇನ್ನೂ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ವಿಪಕ್ಷ ನಾಯಕನ ಆಯ್ಕೆಯಲ್ಲೂ ಭಿನ್ನಾಭಿಪ್ರಾಯ ಮೂಡಿಬಂದಿದ್ದು, ತೃಣಮೂಲ ಕಾಂಗ್ರೆಸ್‌ನ 58 ಶಾಸಕರು ನಾಯಕತ್ವದಿಂದ ಹೊರಬಂದು, ಪಕ್ಷದ ಅಧಿಕೃತ ಅಭ್ಯರ್ಥಿ ಶೋವಂದೇಬ್ ಚಟ್ಟೋಪಾಧ್ಯಾಯ ಅವರನ್ನು ತಿರಸ್ಕರಿಸಿ, ವಿಪಕ್ಷ ನಾಯಕನನ್ನಾಗಿ ಋತಬ್ರತ ಬ್ಯಾನರ್ಜಿ ಆಯ್ಕೆ ಮಾಡಿಕೊಂಡಿದ್ದಾರೆ. ವಿಧಾನಸಭಾ ಸ್ಪೀಕರ್ ಸಹ ಋತಬ್ರತಾ ಅವರನ್ನು ಎಲ್‌ಒಪಿ ಎಂದು ಗುರುತಿಸಿದ್ದಾರೆ.