_1769192351914.webp?w=480&auto=format%2Ccompress&fit=max)
_1769192351914.webp?w=480&auto=format%2Ccompress&fit=max)
ಮುಂಬೈ: ಷೇರು ಮಾರುಕಟ್ಟೆ ಶುಕ್ರವಾರ ಮತ್ತೆ ಇಳಿಕೆಯಾಗಿದ್ದು, ವ್ಯಾಪಕ ಮಾರಾಟದ ಒತ್ತಡ ಮತ್ತು ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯದ ಸಾರ್ವಕಾಲಿಕ ಕುಸಿತದ ಪರಿಣಾಮ ಸುಮಾರು ಶೇ. 1ರಷ್ಟು ನಷ್ಟದೊಂದಿಗೆ ವಹಿವಾಟು ಕೊನೆಗೊಳಿಸಿದೆ.
ಇದರ ಜತೆಗೆ, ದೇಶೀಯ ಮಾರುಕಟ್ಟೆಯಲ್ಲಿ ಯಾವುದೇ ಸಕಾರಾತ್ಮಕ ಅಂಶಗಳಿಲ್ಲದ ಕಾರಣ ಹೂಡಿಕೆದಾರರು ದೂರ ಸರಿದು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡಿರುವುದು ಮತ್ತು ವಿದೇಶಿ ಬಂಡವಾಳದ ನಿರಂತರ ಹೊರಹರಿವು ಮಾರುಕಟ್ಟೆಯ ಹಿನ್ನಡೆಗೆ ಕಾರಣವಾಯಿತು ಎಂದು ವರ್ತಕರು ತಿಳಿಸಿದ್ದಾರೆ.
ದಿನದ ವಹಿವಾಟಿನ ಅವಧಿಯಲ್ಲಿ 835.55 ಅಂಕ ಕುಸಿತ ಕಂಡು 81,471.82ರ ಕನಿಷ್ಠ ಮಟ್ಟ ತಲುಪಿದ್ದ ಸೆನ್ಸೆಕ್ಸ್ ಕೊನೆಯಲ್ಲಿ 769.67 ಅಂಕ ಕುಸಿದು 81,537.70 ಮಟ್ಟದಲ್ಲಿ ಸ್ಥಿರವಾಯಿತು. ನಿಫ್ಟಿ 241.25 ಅಂಕ ಇಳಿಕೆಯಾಗಿ 25,048.65ರ ಮಟ್ಟದಲ್ಲಿ ದಿನದ ವಹಿವಾಟು ಮುಗಿಸಿತು. ವಹಿವಾಟಿನ ಮಧ್ಯೆ ಇದು 264.6 ಅಂಕ ಕುಸಿದು 25,025.30ರ ಕನಿಷ್ಠ ಮಟ್ಟವನ್ನು ಮುಟ್ಟಿತ್ತು.ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ 2,549.80 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ದೇಶೀಯ ಸಾಂಸ್ಥಿಕ ಹೂಡಿಕೆದಾರರು 4,222.98 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 1.03ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್ಗೆ 64.72 ಡಾಲರ್ ತಲುಪಿದೆ.