ಪ್ರಸ್ತುತ ಭಾರತೀಯ ಸಂಸತ್ತಿನ ಉಭಯ ಸದನಗಳಲ್ಲಿ ತೃಣಮೂಲ ಕಾಂಗ್ರೆಸ್ ಒಟ್ಟು 41 ಸಂಸದರನ್ನು ಹೊಂದಿದೆ. ಈ ಪೈಕಿ 28 ಲೋಕಸಭಾ ಸದಸ್ಯರಿದ್ದರೆ, 13 ರಾಜ್ಯಸಭಾ ಸದಸ್ಯರಿದ್ದಾರೆ. ಮೂಲಗಳ ಪ್ರಕಾರ, ದೆಹಲಿ ನಾಯಕರೊಂದಿಗೆ ಸಂಪರ್ಕದಲ್ಲಿರುವ 20 ಸಂಸದರು ಒಟ್ಟಾಗಿ ಬಂಡಾಯವೆದ್ದು ಪ್ರತ್ಯೇಕ ಬಣ ಗುರುತಿಸಿಕೊಳ್ಳಲು ಅಥವಾ ನೇರವಾಗಿ ಬಿಜೆಪಿಗೆ ಬೆಂಬಲ ಘೋಷಿಸಲು ತಂತ್ರ ರೂಪಿಸುತ್ತಿದ್ದಾರೆ.