ವಿದೇಶಿ ಮಣ್ಣಿನಲ್ಲಿ ಅನಿಮೇಶ್ ಕುಜುರ್ ಐತಿಹಾಸಿಕ ದಾಖಲೆ! 100 ಮೀ. ಓಟದಲ್ಲಿ ಸಮಯಕ್ಕೆ ಸವಾಲೆಸೆದ 2ನೇ ಭಾರತೀಯ

ಭಾರತದ ಕ್ರೀಡಾಪಟು ಅನಿಮೇಶ್ ಕುಜುರ್
ಭಾರತದ ಕ್ರೀಡಾಪಟು ಅನಿಮೇಶ್ ಕುಜುರ್
Published on

ಪ್ರಮುಖ ಮುಖ್ಯಾಂಶಗಳು

  • ವಿದೇಶಿ ಮಣ್ಣಿನಲ್ಲಿ ಐತಿಹಾಸಿಕ ದಾಖಲೆ ಬರೆದ ಭಾರತೀಯ ಅನಿಮೇಶ್ ಕುಜುರ್
  • 10.14 ಸೆಕೆಂಡುಗಳಲ್ಲಿ ಗುರಿ ತಲುಪಿದ ಎರಡನೇ ಭಾರತೀಯ ಓಟಗಾರ
ಜರ್ಮನಿ: 200 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ಕ್ರೀಡಾಪಟು ಅನಿಮೇಶ್ ಕುಜುರ್, ಶನಿವಾರ (ಜು.11) ವಿದೇಶಿ ಮಣ್ಣಿನಲ್ಲಿ ಮತ್ತೊಂದು ಐತಿಹಾಸಿಕ ರೆಕಾರ್ಡ್​ ನಿರ್ಮಿಸುವ ಮೂಲಕ ಇಡೀ ಭಾರತೀಯರನ್ನು ಹೆಮ್ಮೆ ಪಡಿಸಿದ್ದಾರೆ. 
ಜರ್ಮನಿಯ ವೆಟ್ಜ್ಲರ್‌ನ ಎನ್‌ವಾಗ್ ಸ್ಟೇಡಿಯಂನಲ್ಲಿ ನಡೆದ ಪೂಮಾ ಫಾಸ್ಟ್ ಆರ್ಮ್ಸ್ ಫಾಸ್ಟ್ ಲೆಗ್ಸ್ 2026 ಕೂಟದ ಪುರುಷರ 100 ಮೀಟರ್ ಫೈನಲ್‌ನಲ್ಲಿ ಅನಿಮೇಶ್​ ಈ ಹೊಸ ಮೈಲಿಗಲ್ಲು ತಲುಪಿದ್ದಾರೆ. ಕೇವಲ 10.14 ಸೆಕೆಂಡುಗಳಲ್ಲಿ ಗುರಿ ತಲುಪಿದ ಎರಡನೇ ಭಾರತೀಯ ಓಟಗಾರನಾಗಿ ಹೊರಮ್ಮಿದ್ದಾರೆ. ಇದು ಅವರ ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ಎಂಬುದು ಗಮನಾರ್ಹ.

ವಿದೇಶಿ ನೆಲದಲ್ಲಿ ಭಾರತೀಯನ ಅತಿವೇಗದ ದಾಖಲೆ

ಅನಿಮೇಶ್ ದಾಖಲಿಸಿದ 10.14 ಸೆಕೆಂಡುಗಳ ಈ ಸಮಯವು, ವಿದೇಶಿ ನೆಲದಲ್ಲಿ ಭಾರತೀಯ ಓಟಗಾರನೊಬ್ಬ ದಾಖಲಿಸಿದ ಸಾರ್ವಕಾಲಿಕ ಅತಿವೇಗದ 100 ಮೀಟರ್ ರನ್ನಿಂಗ್ ಆಗಿದೆ. ಒಟ್ಟಾರೆಯಾಗಿ ಭಾರತದ ಇತಿಹಾಸದಲ್ಲೇ ಇದು ಎರಡನೇ ಅತಿವೇಗದ ಟೈಮಿಂಗ್ ಆಗಿದ್ದು, ಗುರಿಂದರ್​ ವೀರ್​ ಸಿಂಗ್ ಅವರ 10.09 ಸೆಕೆಂಡುಗಳ ರಾಷ್ಟ್ರೀಯ ದಾಖಲೆಯ ಮುರಿಯಲು ಸಾಧ್ಯವಾಗಿಲ್ಲ.

ಅಗ್ರ 5 ರೇಸ್‌ಗಳಲ್ಲಿ ಅನಿಮೇಶ್ ಗುರುತು

ಈಗಾಗಲೇ 200 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಒಡಿಶಾದ ಈ ರನ್ನರ್​, ಈಗ 100 ಮೀಟರ್‌ನಲ್ಲೂ ಭಾರತದ ಅತ್ಯಂತ ವೇಗದ ರನ್ನರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಭಾರತದ ಸಾರ್ವಕಾಲಿಕ ಅಗ್ರ 5 ಅತಿವೇಗದ 100 ಮೀಟರ್ ಓಟದ ದಾಖಲೆಗಳಲ್ಲಿ ಮೂರು ರೆಕಾರ್ಡ್​ಗಳು ಅನಿಮೇಶ್ ಹೆಸರಲ್ಲೇ ಇವೆ.

ಭಾರತದ ಅಗ್ರ 5 ಅತಿವೇಗದ 100 ಮೀಟರ್ ದಾಖಲೆಗಳು

ಗುರಿಂದರ್​ ವೀರ್​ ಸಿಂಗ್ - 10.09 ಸೆಕೆಂಡ್​
ಅನಿಮೇಶ್ ಕುಜುರ್ - 10.14 ಸೆಕೆಂಡ್​
ಅನಿಮೇಶ್ ಕುಜುರ್ - 10.15 ಸೆಕೆಂಡ್​
ಗುರಿಂದರ್​ ವೀರ್​ ಸಿಂಗ್ - 10.17 ಸೆಕೆಂಡ್​
ಅನಿಮೇಶ್ ಕುಜುರ್ - 10.18 ಸೆಕೆಂಡ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net