ಅನಿಲ್​ ರೆಡ್ಡಿ ಪುತ್ರಿ ಆರತಕ್ಷತೆ: ಮತ್ತೆ ಜೊತೆಯಾಗಿ ಕಾಣಿಸಿಕೊಂಡ ವಿಜಯ್​​-ತ್ರಿಷಾ; ವಿಡಿಯೋ ವೈರಲ್! Vijay Trisha

CM Vijay and actress Trisha Krishnan extended their best wishes to the newlyweds at a grand reception held at 'The Leela Palace' in Chennai.
ಚೆನ್ನೈನ 'ದಿ ಲೀಲಾ ಪ್ಯಾಲೇಸ್'ನಲ್ಲಿ ನಡೆದ ಅದ್ಧೂರಿ ಆರತಕ್ಷತೆಯಲ್ಲಿ ನವದಂಪತಿಗೆ ಶುಭ ಹಾರೈಸಿದ ಸಿಎಂ ವಿಜಯ್ ಹಾಗೂ ನಟಿ ತ್ರಿಷಾ ಕೃಷ್ಣನ್.
Published on: 

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್​ ವಿಜಯ್ ಹಾVijayavaniಗೂ ಸೌತ್ ಬ್ಯೂಟಿ ತ್ರಿಷಾ ಕೃಷ್ಣನ್ ಮತ್ತೆ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಸೋಷಿಯಲ್​ ಮೀಡಿಯಾನಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ.

ಗುರುವಾರ (ನ. 5) ಚೆನ್ನೈನ ಪ್ರತಿಷ್ಠಿತ 'ದಿ ಲೀಲಾ ಪ್ಯಾಲೇಸ್'ನಲ್ಲಿ ನಡೆದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಸೋದರಸಂಬಂಧಿ, ವೈ.ಎಸ್. ಅನಿಲ್ ರೆಡ್ಡಿ ಅವರ ಪುತ್ರಿ ಶ್ರೇಯಾ ಮತ್ತು ಉಜ್ವಲ್ ಅವರ ವಿವಾಹ ಆರತಕ್ಷತೆ ಸಮಾರಂಭಕ್ಕೆ ಇವರು ಜೋಡಿಯಾಗಿ ಹಾಜರಾಗಿದ್ದಾರೆ.

ರಾಯಲ್ ಲುಕ್‌ನಲ್ಲಿ ವಿಜಯ್-ತ್ರಿಷಾ ಎಂಟ್ರಿ!

ಕಾರ್ಯಕ್ರಮಕ್ಕೆ ವಿಜಯ್ ಕಂದು ಬಣ್ಣದ ಸೂಟ್ ಹಾಗೂ ಬಿಳಿ ಶರ್ಟ್ ತೊಟ್ಟು ಕಂಗೊಳಿಸಿದರೆ, ತ್ರಿಷಾ ತಿಳಿ ಗುಲಾಬಿ ಬಣ್ಣದ ರೇಷ್ಮೆ ಸೀರೆಯಲ್ಲಿ ಸರಳ ಹಾಗೂ ಆಕರ್ಷಕವಾಗಿ ಮಿಂಚಿದರು. ವಿಜಯ್ ಅವರೊಂದಿಗೆ ಅವರ ತಾಯಿ ಶೋಭಾ ಚಂದ್ರಶೇಖರ್ ಕೂಡ ಜೊತೆಯಾಗಿದ್ದರು. ವೇದಿಕೆ ಏರಿದ ವಿಜಯ್ ಮತ್ತು ತ್ರಿಷಾ ನವದಂಪತಿಗೆ ಶುಭ ಹಾರೈಸಿ, ಅವರೊಂದಿಗೆ ಖುಷಿ ಖುಷಿಯಾಗಿ ಕ್ಯಾಮೆರಾಗಳಿಗೆ ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋಗಳು ಮತ್ತು ಫೋಟೋಗಳು ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿವೆ.

ಗಣ್ಯರ ಮಹಾಸಂಗಮ: ಜಗನ್-ವಿಜಯ್ ಆಪ್ತ ಮಾತುಕತೆ

ಈ ಶುಭ ಕಾರ್ಯ ಕೇವಲ ವಿವಾಹ ಸಮಾರಂಭವಾಗಿರದೆ ರಾಜಕೀಯ ಮತ್ತು ಉದ್ಯಮ ರಂಗದ ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾಯಿತು. ಆಂಧ್ರದ ಮಾಜಿ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ, ತಮ್ಮ ಪತ್ನಿ ವೈ.ಎಸ್. ಭಾರತಿ ಹಾಗೂ ತಾಯಿ ವೈ.ಎಸ್. ವಿಜಯಮ್ಮ ಅವರೊಂದಿಗೆ ಆಗಮಿಸಿ ನವದಂಪತಿಗೆ ಆಶೀರ್ವದಿಸಿದರು. ಇದೇ ವೇಳೆ ಮುಖ್ಯಮಂತ್ರಿ ವಿಜಯ್ ಹಾಗೂ ಜಗನ್ ಪರಸ್ಪರ ಆತ್ಮೀಯವಾಗಿ ಕುಶಲೋಪರಿ ವಿಚಾರಿಸಿ ಫೋಟೋಗಳಿಗೆ ಪೋಸ್ ನೀಡಿದ್ದು ಸಭಿಕರ ಗಮನ ಸೆಳೆಯಿತು.

Also Read
ರಾಹುಲ್​ ರ‍್ಯಾಲಿಗೆ ಯುವಪಡೆ ಗೈರು: 7 ರಾಜ್ಯಗಳ 202 ಯೂಥ್​ ಐಕಾನ್​ಗಳಿಗೆ ಕಾಂಗ್ರೆಸ್ ಗೇಟ್‌ಪಾಸ್! Rahul Gandhi
CM Vijay and actress Trisha Krishnan extended their best wishes to the newlyweds at a grand reception held at 'The Leela Palace' in Chennai.

ಇವರಲ್ಲದೆ ದೇಶದ ಖ್ಯಾತ ಕೈಗಾರಿಕೋದ್ಯಮಿ ಗೌತಮ್ ಅದಾನಿ, ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ (ಕೆಟಿಆರ್) ತಮ್ಮ ಪತ್ನಿ ಶೈಲಿಮಾ ಅವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾಜಕೀಯ ಹಾಗೂ ಉದ್ಯಮ ರಂಗದ ಹಲವು ಪ್ರಮುಖರು ಈ ಸಂಭ್ರಮದಲ್ಲಿ ಹಾಜರಿದ್ದರು.

ಮತ್ತೆ ಮುನ್ನೆಲೆಗೆ ಬಂದ ವಿಜಯ್-ತ್ರಿಷಾ ಒಡನಾಟ!

'ಗಿಲ್ಲಿ', 'ಕುರುವಿ'ಯಿಂದ ಹಿಡಿದು ಬ್ಲಾಕ್‌ಬಸ್ಟರ್ 'ಲಿಯೋ' ಸಿನಿಮಾದವರೆಗೆ ಬೆಳ್ಳಿತೆರೆಯ ಮೇಲೆ ಮೋಡಿ ಮಾಡಿರುವ ವಿಜಯ್ ಹಾಗೂ ತ್ರಿಷಾ, ನಿಜಜೀವನದಲ್ಲೂ ಅತ್ಯಂತ ಆತ್ಮೀಯ ಒಡನಾಟ ಹೊಂದಿದ್ದಾರೆ. ಇವರಿಬ್ಬರು ಒಟ್ಟಿಗೆ ಎಲ್ಲಿಯೇ ಕಾಣಿಸಿಕೊಂಡರೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುವುದು ಮಾಮೂಲಿಯಾಗಿದೆ.

ಈ ವರ್ಷದ ಮಾರ್ಚ್ ತಿಂಗಳಲ್ಲಿ ಖ್ಯಾತ ನಿರ್ಮಾಪಕ ಕಲ್ಪತಿ ಎಸ್. ಸುರೇಶ್ ಪುತ್ರನ ವಿವಾಹ ಆರತಕ್ಷತೆಯಲ್ಲೂ ಇಬ್ಬರೂ ಜೊತೆಯಾಗಿ ಭಾಗವಹಿಸಿದ್ದರು. ಬಳಿಕ ಮೇ ತಿಂಗಳಲ್ಲಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಐತಿಹಾಸಿಕ ಕ್ಷಣಕ್ಕೂ ತ್ರಿಷಾ ಅವರು ಕುಟುಂಬ ಸಮೇತರಾಗಿ ಸಾಕ್ಷಿಯಾಗಿದ್ದರು.

ಅಷ್ಟೇ ಅಲ್ಲದೆ, ಕಳೆದ ಸೆಪ್ಟೆಂಬರ್‌ನಲ್ಲಿ ಯುಕೆ ಸಿಲ್ವರ್‌ಸ್ಟೋನ್ ಸರ್ಕ್ಯೂಟ್‌ನಲ್ಲಿ ನಡೆದ 'ಮಿಚೆಲಿನ್ ಲೆ ಮಾನ್ಸ್ ಕಪ್' ರೇಸ್‌ನಲ್ಲಿ ನಟ ಅಜಿತ್ ಕುಮಾರ್ ಸ್ಪರ್ಧಿಸಿದ್ದಾಗ, ಅವರನ್ನು ಹುರಿದುಂಬಿಸಲು ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ಹಾಜರಾಗಿದ್ದು ಭಾರಿ ಸುದ್ದಿಯಾಗಿತ್ತು, (ಏಜೆನ್ಸೀಸ್​​).