ತಮ್ಮ ಮಗನ ಅಗಲಿಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅತೀವ ದುಃಖ ವ್ಯಕ್ತಪಡಿಸಿರುವ ಅನಿಲ್ ಅಗರ್ವಾಲ್, "ನನ್ನ ಹಿರಿಯ ಮಗ ಅಗ್ನಿವೇಶ್ ನಮ್ಮನ್ನು ಅಗಲಿದ್ದಾನೆ ಎಂಬ ವಿಷಯವನ್ನು ಹಂಚಿಕೊಳ್ಳಲು ನನಗೆ ಪದಗಳೇ ಸಿಗುತ್ತಿಲ್ಲ. ಅವನು ಕೇವಲ ಮಗನಾಗಿರಲಿಲ್ಲ, ನನ್ನ ಶಕ್ತಿಯಾಗಿದ್ದ. ಮೌಂಟ್ ಸಿನಾಯ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಗ ಈ ಅನಿರೀಕ್ಷಿತ ಘಟನೆ ಸಂಭವಿಸಿದೆ" ಎಂದು ಬರೆದುಕೊಂಡಿದ್ದಾರೆ.