ಜುಲೈ.14ರಂದು ಮಂಗಳವಾರ ಗುಡುಪಲ್ಲೆ ಮಂಡಲದ ಮಲ್ಲಪ್ಪ ಕೊಂಡದ ಮೇಲಿರುವ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರೋಣವೆಂದು ಪಟ್ಟು ಹಿಡಿದಿದ್ದಳು. ಆಕೆಯ ಮನವಿಗೆ ಒಪ್ಪಿಗೆ ಕೊಟ್ಟ ಆತ ಪತ್ನಿ ಹಾಗೂ ಮಗುವಿನೊಂದಿಗೆ ಗಾಡಿಯಲ್ಲಿ ಹೊರಟಿದ್ದ. ಇತ್ತ ಹಾಸಿನಿ ಪ್ರಿಯಕರನಿಗೆ ಲೈವ್ ಲೊಕೇಶನ್ ಕೊಟ್ಟಿದ್ದಳು. ಈ ಬಗ್ಗೆ ಅರಿಯದ ರಮೇಶ್ ಪತ್ನಿ, ಮಗುವಿನೊಂದಿಗೆ ಸಂತೋಷದಿಂದ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.