ಆಂಧ್ರ v/s ತೆಲಂಗಾಣ; ಕಾಂಗ್ರೆಸ್, ಬಿಆರ್​ಎಸ್ ನಾಯಕರ ಬಳಿಕ ಪವನ್ ಕಲ್ಯಾಣ್ ವಿರುದ್ಧ ನಟ ರಾಹುಲ್ ರಾಮಕೃಷ್ಣ ಕಿಡಿ | Rahul Ramakrishna

ರಾಹುಲ್ ರಾಮಕೃಷ್ಣ ಮತ್ತು ಪವನ್ ಕಲ್ಯಾಣ್
ರಾಹುಲ್ ರಾಮಕೃಷ್ಣ ಮತ್ತು ಪವನ್ ಕಲ್ಯಾಣ್
Published on
ಹೈದರಾಬಾದ್: ತೆಲಂಗಾಣದಲ್ಲಿ ಮತ್ತು ಆಂಧ್ರ v/s ತೆಲಂಗಾಣ ಎನ್ನುವ ಪ್ರಾದೇಶಿಕ ರಾಜಕೀಯ ಭಾವನೆ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್, ಬಿಆರ್​ಎಸ್​ ನಾಯಕರ ಬಳಿಕ ತೆಲುಗು ಸಿನಿಮಾದ ಹಾಸ್ಯ ನಟ ರಾಹುಲ್ ರಾಮಕೃಷ್ಣ ಅವರು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ವಿರುದ್ಧ ಎಕ್ಸ್​ನಲ್ಲಿ ಪೋಸ್ಟ್ ಮಾಡಿ ಕಿಡಿಕಾರಿದ್ದಾರೆ.
ತೆಲಂಗಾಣ ನಿಮ್ಮಪ್ಪಂದಿರ ಆಸ್ತಿಯೇ? ತೆಲಂಗಾಣದಲ್ಲಿ ಜನಸೇನಾ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂಬ ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಮಾತು ತೆಲಂಗಾಣ ಕಾಂಗ್ರೆಸ್ ಮತ್ತು ಬಿಆರ್​​ಎಸ್ ನಾಯಕರ ಕೋಪ ತರಿಸಿತ್ತು. ಅದಕ್ಕೆ ಕೌಂಟರ್ ನೀಡಿದ್ದ ಅವರು, ಹೌದು ತೆಲಂಗಾಣ ನಮ್ಮಪ್ಪಂದಿರ ಆಸ್ತಿಯೇ? ನಿಮಗೇನು ಇಲ್ಲಿ ಕೆಲಸ ಎಂದು ತಿರುಗೇಟು ನೀಡಿದ್ದರು.
ಈ ವಿಷಯ ಕುರಿತು ಪವನ್ ಕಲ್ಯಾಣ್ ಆಂಧ್ರದಲ್ಲಿ ಸ್ಪಷ್ಟೀಕರಣ ನೀಡಿದ್ರೂ ಎರಡೂ ರಾಜ್ಯಗಳಲ್ಲೂ ಆಂಧ್ರ v/s ತೆಲಂಗಾಣ ಚರ್ಚೆ ಮುಂದುವರೆದಿದೆ. ಇದೀಗ ಅವರ ಸಾಲಿಗೆ ತೆಲಂಗಾಣ ಮೂಲದ ತೆಲುಗಿನ ಹಾಸ್ಯ ನಟ ರಾಹುಲ್ ರಾಮಕೃಷ್ಣ,ಪವನ್ ಕಲ್ಯಾಣ್ ಅವರ ಖಾತೆಗಳ ಕೆಲಸದ ಬಗ್ಗೆ ಪ್ರಶ್ನಿಸಿ ಸಂಚಲನ ಮೂಡಿಸಿದ್ದು, ಪರವಿರೋಧ ಚರ್ಚೆ ನಡೆಯುತ್ತಿದೆ.
ಎಕ್ಸ್​ನಲ್ಲಿ ರಾಹುಲ್ ರಾಮಕೃಷ್ಣ, ಪವನ್ ಕಲ್ಯಾಣ್ ಅವರಿಗೆ ನಿಮ್ಮ ಅಭಿಮಾನಿಯಾಗಿ ಕೇಳುತ್ತಿದ್ದೇನೆ, ನಿಮ್ಮ ಪ್ರಚಾರವನ್ನು ಬದಿಗಿಟ್ಟು, ಮಾಹಿತಿ ಹಕ್ಕು ಕಾಯ್ದೆಯಡಿ ಪ್ರತಿಯೊಂದು ಇಲಾಖೆಯಲ್ಲಿ ಮಾಹಿತಿ ಬಹಿರಂಗಪಡಿಸುವ ಕುರಿತು ನೀವು ಸೆಕ್ಷನ್ 4.1 (ಬಿ) ಅನ್ನು ಜಾರಿಗೆ ತಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಟ್ವೀಟ್​ನಲ್ಲಿ ಪೆಸಾ 1/70 ಗ್ರಾಮ ಸಭಾ ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದ ಫಲಿತಾಂಶಗಳನ್ನು ದಯವಿಟ್ಟು ತೋರಿಸಿ. ನೀವು ಯಾವುದೇ ಅರಣ್ಯೀಕರಣ ಕಾರ್ಯಕ್ರಮಗಳನ್ನು ಮಾಡಿದ್ದೀರಾ? ಸ್ವತಂತ್ರ ಸಂಸ್ಥೆ ದೃಢಪಡಿಸಿದ ಅಂಕಿಅಂಶಗಳ ಪ್ರಕಾರ ಅವು ಅನುಮಾನಸ್ಪದವಾಗಿವೆ. ಈ ಬಗ್ಗೆ ಉತ್ತರ ನೀಡಿ ಸರ್ ಎಂದು ಕಡೆಯದಾಗಿ ಕೇಳಿದ್ದಕ್ಕೆ ನಾನು ದೇಶದ್ರೋಹಿ ಅಲ್ಲ. ಜೈ ತೆಲಂಗಾಣ ಎಂದು ಬರೆದುಕೊಂಡಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net