`ಡಿವೋರ್ಸ್​​ ಕೊಡೋದನ್ನ ಪವನ್​ ಕಲ್ಯಾಣ್​ ನೋಡಿ ಕಲೀಬೇಕು' ಎಂದಿದ್ದ ಕಾಮಿಡಿಯನ್ ಪೊಲೀಸರ ವಶಕ್ಕೆ..Anudeep Katikala

comedian Anudeep Katikala
comedian Anudeep Katikala
Published on

ಪ್ರಮುಖ ಮುಖ್ಯಾಂಶಗಳು

  • ಕಾಮಿಡಿಯನ್​ ಅನುದೀಪ್​ ವಿರುದ್ಧ ದೂರು ದಾಖಲು
  • ಪವನ್​ ಕಲ್ಯಾಣ್​, ರಾಮಚರಣ್​, ನಿಹಾರಿಕಾ ಬಗ್ಗೆ ತಮಾಷೆ ಮಾಡಿದ್ದ ಅನುದೀಪ್​
  • ಪ್ರಯಾಗ್​ ರಾಜ್​ನಲ್ಲಿ ಅನುದೀಪ್​ರನ್ನು ವಶಕ್ಕೆ ಪಡೆದುಕೊಂಡ ಆಂಧ್ರ ಪೊಲೀಸರು
ಹೈದರಾಬಾದ್: ಮಹಾರಾಷ್ಟ್ರದ ಡಿಸಿಎಂ ಏಕನಾಥ್​ ಶಿಂಧೆ ಅವರನ್ನು ದ್ರೋಹಿ ಎಂದು ಕರೆದು, ಕುನಾಲ್​ ಕಾಮ್ರಾ ಅವರು ಇಂದಿಗೂ ವಿಚಾರಣೆ ಎದುರಿಸುತ್ತಿದ್ದಾರೆ. ರಣವೀರ್​ ಅಲ್ಲಬಾಡಿಯಾ ಅವರು ಸಹ ತಮಾಷೆ ಮಾಡುವ ಭರದಲ್ಲಿ  ಪೋಷಕರ ಲೈಂಗಿಕತ್ವದ ಬಗ್ಗೆ ಮಾತನಾಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಸದ್ಯ ಅದೇ ಸಾಲಿನಲ್ಲಿ ಹೈದರಬಾದ್​ ಮೂಲದ ಕಾಮಿಡಿಯನ್​ ಅನುದೀಪ್​ ಕಾಟಿಕಾಲ ಇದ್ದಾರೆ.
ಆಂಧ್ರ ಪ್ರದೇಶದ ಡಿಸಿಎಂ ಪವನ್​ ಕಲ್ಯಾಣ್​  ಗುರಿಯಾಗಿಸಿ ಮಾಡಿದ್ದ ತಮಾಷೆಯು ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರ ಹಾಗೂ ಅಭಿಮಾನಿಗಳ   ಕಂಗೆಣ್ಣಿಗೆ ಗುರಿಯಾಗಿದೆ. ಇದ್ರಿಂದಾಗಿ ಸದ್ಯ  ಅನುದೀಪ್​  ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಜನಸೇನಾ ಪಕ್ಷದ ಕಾರ್ಯಕರ್ತನೊಬ್ಬ ದಾಖಲಿಸಿದ್ದ ದೂರಿನ ಆಧಾರದ ಮೇಲೆ, ಪ್ರಯಾಗ್​ರಾಜ್​ನಿಂದ ಪೋಷಕರನ್ನು ಕರೆತರವಾಗ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಮೆಗಾ ಸ್ಟಾರ್​ ಕುಟುಂಬದ ಬಗ್ಗೆ ಹಾಸ್ಯ

ಅನುದೀಪ್​ ಅವರು, ರಾಮ್​ ಚರಣ್​, ನಿಹಾರಿಕಾ ಕೊಂನಿಡೇಲ ವಿಚ್ಛೇದನ, ಹಾಗೂ ಪವನ್​ ಕಲ್ಯಾಣ್  ವಿಚ್ಛೇದನದ ಬಗ್ಗೆ​ ಕಾಮಿಡಿ ಮಾಡಿದ್ದರು. ಒಟ್ಟಾರೆಯಾಗಿ ಮೆಗಾಸ್ಟಾರ್​ ಕುಟುಂಬವನ್ನು ತಮಾಷೆಗೆ ತಳಿದ್ದರು. ಇದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಜನ ಸೇನಾ ಪಕ್ಷದ ಕೋಪಕ್ಕೆ ಗುರಿಯಾಗಿದೆ.  ಕೆಲವರು ಅವರ ಕಚೇರಿಗೆ ನುಗ್ಗಿ ಗಲಾಟೆ ಮಾಡಿದ ಪ್ರಸಂಗವು ನಡೆದಿತ್ತು. 

ದೂರು ದಾಖಲು

ಏಪ್ರಿಲ್​ 11ರಂದು  ಮಧ್ಯಾಹ್ನ 1.15 ಕ್ಕೆ ಕಾಕಿನಾಡ ಐ ಟೌನ್ ಪೊಲೀಸ್ ಠಾಣೆಯಲ್ಲಿ ಬಡೇ ವೆಂಕಟ ಕೃಷ್ಣ  ಎಂಬುವವರು ಅನುದೀಪ್​ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಏಪ್ರಿಲ್​ 14ರ ಸಂಜೆ 7ರ ಸುಮಾರಿಗೆ ಅನುದೀಪ್​ ಅವರನ್ನು ಬಂಧಿಸಲಾಗಿದೆ. ಅನುದೀಪ್ ವಿರುದ್ಧ ಸದ್ಯ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸೆಕ್ಷನ್ 356(2), 353(2), 79 ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಅನುದೀಪ್​  ಮಾಡಿದ್ದ ಜೋಕ್​ ಏನು? 

ಪವನ್​ ಕಲ್ಯಾಣ್​ರಿಂದ  ಎಲ್ಲ ಪುರುಷರು ಕಲಿಯಬೇಕಾದ ವಿಚಾರ ಎಂದರೆ, ಹೆಂಡತಿಯಿಂದ ಹೇಗೆ ವಿಚ್ಛೇದನ ನೀಡುವುದು ಎಂದು ಅವರ ಮೂರು ಡಿವೋರ್ಸ್​ ಪ್ರಕರಣ ಮುಂದಿಟ್ಟು ತಮಾಷೆ ಮಾಡಿದರು. ಇನ್ನು   ನಿಹಾರಿಕ ಕೊನಿಡೇಲ ಅವರು ಡಿವೋರ್ಸ್​ ಪಡೆಯುವ ಬಗ್ಗೆ ಅವರ ಚಿಕ್ಕಪ್ಪನಿಂದ ಸಲಹೆ ಪಡೆದುಕೊಳ್ಳಬಹುದು. ಪವನ್​ ಕಲ್ಯಾಣ್​ ಈ ವಿಚಾರದಲ್ಲಿ ಮಾಸ್ಟರ್​ ಪೀಸ್​ ಇದ್ದಂತೆ ಎಂದು. ರಾಮ್​ ಚರಣ್​ ಸ್ತ್ರೀ ವಾದಿ ಏಕೆಂದರೆ ತಮ್ಮ ಪತ್ನಿ ಉಪಸನಾ ಅವರಿಗಿಂತ ಶ್ರೀಮಂತೆ. ಅವರಿಗಿಂತ ಕಡಿಮೆ ಸಂಬಳವನ್ನು ಅವರು ಪಡೆದುಕೊಳ್ಳುತ್ತಾರೆ ಎಂದು ಹಾಸ್ಯ ಮಾಡಿದರು.  ಜೊತೆಗೆ ಮಹೇಶ್​ ಬಾಬು, ಬಾಲಕೃಷ್ಣ ಬಗ್ಗೆ ಹಾಸ್ಯ ಮಾಡಿದ್ದಾರೆ.
ಘಟನೆ ವೈರಲ್ ಆಗುತ್ತಲೇ ಸೂಕ್ಷ್ಮತೆ ಗಮನಿಸಿದ ಅವರು , ಪವನ್​ ಕಲ್ಯಾಣ್​ ಬಳಿ ಕ್ಷಮೆ ಯಾಚಿಸಿದ ವಿಡಿಯೋವೊಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net